ಶನಿವಾರ, ಮೇ 8, 2021
27 °C

ಜನಪರ ಹೋರಾಟ ಅಗತ್ಯ: ಅಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪಂಚ ಜಿಲ್ಲೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬರುತ್ತಿರುವುದು ಸಂತಸದ ವಿಷಯ. ಜನಪರ ಹೋರಾಟ ಈ ಸಮಿತಿ ಮೂಲ ಉದ್ದೇಶವಾಗಬೇಕು. 371ನೇ ಕಲಂ ಜಾರಿಯ ಜೊತೆಗೆ ಜಿಲ್ಲೆಯ ಸಣ್ಣ ಪುಟ್ಟ ಸಮಸ್ಯೆಗಳ ಕುರಿತು ಹೋರಾಟ ಹಮ್ಮಿಕೊಳ್ಳುವುದು ಸಹ ಮುಖ್ಯ ಎಂದು ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪ ಹೇಳಿದರು.ನಗರದ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ 371ನೇ ಕಲಂ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿದೆ. ಈ ಭಾಗದ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಈ ಬಗ್ಗೆ ಕಾಳಜಿ ಇಲ್ಲ ಎಂದರು.ಅನೇಕ ವರ್ಷದಿಂದ ಸಮರ್ಪಕ ಮಳೆ ಇಲ್ಲದೆ ರೈತರು ಕಷ್ಟಕ್ಕೊಳಗಾಗುತ್ತಿದ್ದಾರೆ. ಈ ಭಾರಿಯಾದರೂ ಜೂನ್ ಕೊನೆಯ ವಾರದಲ್ಲಿ ಕಾಲವೆಗೆ ನೀರು ಬಿಡುವಂತೆ ಒತ್ತಾಯಿಸಿ ಸಮಿತಿ ಹೋರಾಟ ಮಾಡಬೇಕು. ಇದರಿಂದ ಕಾಲುವೆ ಪಕ್ಕದಲ್ಲಿರುವ ರೈತರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಒಳ್ಳೆಯ ಉದ್ದೇಶ ಇಟ್ಟುಕೊಂಡು ಈ ಸಮಿತಿ ಹೋರಾಟಗಳನ್ನು ಆರಂಭಿಸಲಿ ಎಂದು ಹಾರೈಸಿದರು.ಅತಿಥಿಯಾಗಿದ್ದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಯುವಕರು ಹೋರಾಟದ ಮನೋಭಾವನೆ ಬೆಳಿಸಿಕೊಳ್ಳಬೇಕು. ಹೋರಾಟಗಳು ಪತ್ರಿಕೆಯಲ್ಲಿ ಮಾತ್ರ ಸೀಮಿತವಾಗದೆ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ನಡೆಯಬೇಕು ಎಂದರು.ಲಕ್ಷ್ಮಣರಾವ ಗೋಗಿ ಅತಿಥಿಗಳಾಗಿದ್ದರು. ಸಮಿತಿಯ ಗೌರವಾಧ್ಯಕ್ಷ ಶರಣಪ್ಪ ಹದನೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಪಾಟೀಲ ನರಿಬೋಳ ನಿರೂಪಿಸಿದರು. ಶರಣಪ್ಪ ಸುರಪುರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.