ಜೀವ ಸಂಕುಲದ ಅಳಿವು: ವಿನಾಶದ ಸುಳಿವು
ಸೇಡಂ: ಪರಮಾತ್ಮನಲ್ಲಿ ಒಂದಾಗುವ ಆರು ಶ್ರೇಷ್ಠ ವಿಚಾರ ಧಾರೆಗಳು ಹೊಂದಿವೆ ಎಂದು ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.ಅವರು ಬುಧವಾರ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಮತ್ತು ರುದ್ನೂರ ಮಠದ ಪೀಠಾಧಿಪತಿ ಪೂಜ್ಯ ಸದಾಶಿವ ಸ್ವಾಮೀಜಿಯ 28ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸದಾಶಿವ ದಿಜಿಟಲ್ ಮತ್ತು ಶ್ರೀಮತಿ ಬಸ್ಸಮ್ಮ ದಿ.ಬಸವಣ್ಣಪ್ಪ ಅವಂಟಿ ಪರಿವಾರ ಮತ್ತು ವಿವಿಧ ಯುವ ಭಕ್ತ ಸಂಘಟನೆಗಳು ಹಮ್ಮಿಕೊಂಡಿದ್ದ ಶ್ರೀಗಳವರ ತುಲಾಭಾರ, ಬೆಳ್ಳಿ ಕಿರೀಟ ಧಾರಣೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಿಸರ್ಗ, ಪಶು-ಪಕ್ಷಿಗಳು ನಾಶವಾದರೆ ದೇಶ ವಿನಾಶದ ಅಂಚಿನಲ್ಲಿ ಸಾಗಿದಂತೆ ಎಂದು ಅವರು ಎಚ್ಚರಿಸಿದರು. ಜೀವರಾಶಿಗಳ ಮಧ್ಯೆ ಜೀವನ ನಿಂತಿದೆ ಎಂದು ಕಿವಿ ಮಾತು ಹೇಳಿದರು. ಉತ್ತಮ ವಿಚಾರಗಳು ಬಹು ದೊಡ್ಡ ಶಕ್ತಿ ಎಂದರು.ಪ್ರಾಚಾರ್ಯ ಶಿವಯ್ಯ ಮಠಪತಿ ಮೇಳಕುಂದಿ ಮಾತನಾಡಿ ಉತ್ತಮ ಬದುಕಿನ ಕಾಯಕದಲ್ಲಿ ಸಾಗುವುದೇ ನಮ್ಮ ಮುಂದಿರುವ ಗುರಿ ಎಂದರು. ಸದಾಶಿವ ಸ್ವಾಮೀಜಿ, ಸಂತೋಷ, ಮಲ್ಲಿಕಾರ್ಜುನ ಹೊಸಳ್ಳಿ ಇದ್ದರು. ಮಹಿಪಾಲರೆಡ್ಡಿ ಮನ್ನೂರು ನಿರೂಪಿಸಿದರು. ಪೂಜ್ಯ ಶಿವಶಂಕರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ 28 ವಿವಿಧ ಸಂಘಟನೆಗಳು, ತಾಪಡಿಯಾ, ಹೆಡ್ಡಾ ಪರಿವಾರ, ಮಹಿಳಾ ಭಜನಾ ಮಂಡಳಿ ಸೇರಿದಂತೆ ಅನೇಕರು ಪೂಜ್ಯರನ್ನು ಸನ್ಮಾನಿಸಿ ಹುಟ್ಟು ಹಬ್ಬದ ಶುಭಾಷಯ ಕೋರಿ ಆಶೀರ್ವಾದ ಪಡೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.