ಬುಧವಾರ, ಮೇ 18, 2022
23 °C

ಸಂತೃಪ್ತ ಜೀವನಕ್ಕೆ ಕಾಯಕ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಪ್ರತಿಯೊಬ್ಬರು ಕಾಯಕದಲ್ಲಿ ನಿರತರಾಗಿದ್ದರೆ ಮಾತ್ರ ಕುಟುಂಬ ಮತ್ತು ಸಮಾಜದಲ್ಲಿ ಸಂತೃಪ್ತಿಯ ಜೀವನ ನಿರ್ವಹಿಸಲು ಸಾಧ್ಯವಾಗುವುದು ಎಂದು ಗುಲ್ಬರ್ಗದ ಶರಣೆ ಪ್ರಭುಶ್ರೀ ತಾಯಿ ಅಭಿಮತಪಟ್ಟರು.

ತಾಲ್ಲೂಕು ಬಸವಕೇಂದ್ರ ಮತ್ತು ಬಸವ ಮಾರ್ಗ ಪ್ರತಿಷ್ಠಾನದ   ವತಿಯಿಂದ ಭಾನುವಾರ ಶರಣ   ನಗರದ ಮಹಾದೇವ ಪಗಡೆ ನಿವಾಸದಲ್ಲಿ ಹಮ್ಮಿಕೊಂಡ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಮುಖ್ಯಗುರು ಶರಣಪ್ಪ ಘಂಟೆ ಮಾತನಾಡಿ ಕಾಯಕದಲ್ಲಿ ಮೇಲು ಕೀಳು ಎಂಬ ಭೇದಭಾವ ಮಾಡಬಾರದು, ನಿರಂತರವಾಗಿ ಕಾಯಕದಲ್ಲಿ ತೊಡಗಿದಾಗ ಮಾತ್ರ ನಮ್ಮ ಎಲ್ಲ ಅಗತ್ಯಗಳು ಪೂರೈಸಿಕೊಂಡು ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯಲು ಸಾಧ್ಯವಾಗುವುದು ಎಂದು ಹೇಳಿದರು.ವೀರಶೈವ ಸಮಾಜದ ಮುಖಂಡ ಬಾಬುರಾವ ಮಡ್ಡೆ, ಪಂಡಿತರಾವ ಧೂಳೆ, ಯೋಗಿರಾಜ ಮಾಡ್ಯಾಳೆ, ಧರ್ಮಲಿಂಗ ಜಗದೆ, ಸಂಜಯ ಮೋರೆ, ಚಂದ್ರಕಾಂತ ಫುಲಾರ, ಸುಧೀರ ಹಿಪ್ಪರ್ಗಿ, ಗುಂಡಪ್ಪ ಗೋಳೆ, ಪಂಡಿತ ಮಾಳಿ, ಅಶೋಕ ರೆಡ್ಡಿ, ಅಶೋಕ ಮಸುಂದೆ, ಲಿಂಗರಾಜ ಮಸುಂದೆ, ಗುಂಡು ಗೌಳಿ, ಶ್ರೀಮಂತ ಕಾರಬಾರಿ ಇದ್ದ. ಕಲಾವಿದ ಬಸವರಾಜ ಮತ್ತು ವಿಜಯ ಆಳಂದ ಅವರಿಂದ ವಚನಗಾಯನ ನೆರವೇರಿತು. ಸೀಮಾ ಗೊಬ್ಬೂರೆ ನಿರೂಪಿಸಿದರು. ಮಲ್ಲು ವಣದೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.