ಮಸಾಲೆಪುಡಿ ಉದ್ಯಮ ಸ್ಥಾಪನೆಗೂ ಲಂಚ!

7

ಮಸಾಲೆಪುಡಿ ಉದ್ಯಮ ಸ್ಥಾಪನೆಗೂ ಲಂಚ!

Published:
Updated:

ಬೆಂಗಳೂರು: ಮಸಾಲೆ ಪುಡಿ ತಯಾರು ಮಾಡುವ ಸಣ್ಣ ಉದ್ಯಮ ಪ್ರಾರಂಭಿಸಲು ಪರವಾನಗಿ ನೀಡುವುದಕ್ಕೆ ಅರ್ಜಿದಾರರಿಂದ ₹ 5,000 ಲಂಚ ಪಡೆಯುತ್ತಿದ್ದ ಆಹಾರ ಸುರಕ್ಷತಾ ಅಧಿಕಾರಿ ಉಲ್ಲಾಸ ಬಿ. ಗಂಗನಹಳ್ಳಿ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಅರ್ಜಿದಾರರು ಶೇಷಾದ್ರಿ ರಸ್ತೆಯಲ್ಲಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪರವಾನಗಿ ನೀಡಲು 5 ಸಾವಿರ ಲಂಚ ಕೇಳಿದ್ದರು. ಅರ್ಜಿದಾರರಿಂದ ಸೋಮವಾರ ಉಲ್ಲಾಸ ಲಂಚ ಪಡೆಯುವಾಗ ಸಿಕ್ಕಿಬಿದ್ದರು.

ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಆಹಾರ ಸುರಕ್ಷತಾ ಅಧಿಕಾರಿ ಬಳಿ ₹ 90,000 ಹಣ ಸಿಕ್ಕಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಉಲ್ಲಾಸ ಬಿ. ಗಂಗನಹಳ್ಳಿ ಅವರನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !