ಕಳಚಿದ ಬಸ್‌ ಗಾಲಿ: ತಪ್ಪಿದ ಅನಾಹುತ

7

ಕಳಚಿದ ಬಸ್‌ ಗಾಲಿ: ತಪ್ಪಿದ ಅನಾಹುತ

Published:
Updated:
Deccan Herald

ಸಿಂದಗಿ: ಸಾರಿಗೆ ಸಂಸ್ಥೆಯ ಬಸ್ ಗಾಲಿಗಳು ಬಸ್‌ನಿಂದ ಕಳಚಿದ ಘಟನೆ ತಾಲ್ಲೂಕಿನ ಬೋರಗಿ-ಪುರದಾಳ ಮಾರ್ಗ ಮಧ್ಯದಲ್ಲಿ ಬುಧವಾರ ನಡೆದಿದೆ.

30-40 ಪ್ರಯಾಣಿಕರು ಬಸ್‌ನಲ್ಲಿದ್ದರು. ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಮ್ಮಿಂದೊಮ್ಮೆಲೇ ಬಸ್‌ನ ಹಿಂದಿನ ಎರಡೂ ಗಾಲಿಗಳು ಬಸ್‌ನಿಂದ ಬೇರ್ಪಟ್ಟು ನೆಲಕ್ಕುರುಳಿತು. ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದನ್ನು ಹೊರತುಪಡಿಸಿದರೆ ಅಂಥ ಗಂಭೀರ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

‘ಸಿಂದಗಿ ಬಸ್ ಡಿಪೊದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಜರಿ ಬಸ್‌ಗಳೇ ತುಂಬಿಕೊಂಡಿವೆ. ಅಂಥ ಬಸ್‌ಗಳನ್ನೇ ಓಡಾಡಿಸುತ್ತಿದ್ದಾರೆ. ಇದರಿಂದಾಗಿ ಪದೇ, ಪದೇ ಅಪಘಾತ ಸಂಭವಿಸುತ್ತಿವೆ. ಇದೇ ಮತಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಯಾವುದೇ ಬದಲಾವಣೆಯಾಗಿಲ್ಲ’  ಎಂದು ಬೋರಗಿ ಗ್ರಾಮದ ಮಲ್ಲೂ ಸಾವಳಸಂಗ ಬೇಸರ ವ್ಯಕ್ತಪಡಿಸಿದರು. 

‘ಬಸ್ ಸುಸ್ಥಿತಿಯಲ್ಲಿಯೇ ಇದೆ. ಆದರೆ ಚಾಲಕ, ಸ್ಪೀಡ್ ಬ್ರೇಕರ್‌ ಚಲಾಯಿಸಿದ್ದರಿಂದ ಗಾಲಿಗಳು ಬೇರ್ಪಟ್ಟಿವೆ. ಚಾಲಕನ ಬೇಜವಾಬ್ದಾರಿತನ ಇದಕ್ಕೆ ಕಾರಣ’ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಚ್.ಮದಬಾವಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !