'ಆಚಾರ್ಯ 2018' ಕಾರ್ಯಕ್ರಮ

7

'ಆಚಾರ್ಯ 2018' ಕಾರ್ಯಕ್ರಮ

Published:
Updated:

ವಿಜಯಪುರ: ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದಡಿಯಲ್ಲಿ 'ಆಚಾರ್ಯ 2018' ಕಾರ್ಯಕ್ರಮದ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ವಿಜ್ಞಾನ ಮಾದರಿ ತಯಾರಿಕಾ ಹಾಗೂ ವಸ್ತು ಪ್ರದರ್ಶನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಜಿಲ್ಲಾ ಮುಖ್ಯಸ್ಥೆ ಗೀತಾ ಪಾಟೀಲ ತಿಳಿಸಿದರು.

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ತಮ್ಮ ಕೌಶಲವನ್ನು ವ್ಯಕ್ತಪಡಿಸಲು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ, ವಿಜ್ಞಾನ ಚಟುವಟಿಕೆ ಕೇಂದ್ರ, ಎಂ.ಬಿ.ಪಾಟೀಲ ಪ್ರತಿಷ್ಠಾನದ ವತಿಯಿಂದ ಡಿ.14, 15 ರಂದು ಇಲ್ಲಿನ ವಿಜ್ಞಾನ ಚಟುವಟಿಕೆ ಕೇಂದ್ರದ ಆವರಣದಲ್ಲಿ ಎರಡು ದಿನ ಕಾರ್ಯಾಗಾರ ನಡೆಯಲಿದೆ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೊಡಗು, ಮಂಡ್ಯ, ಬೆಳಗಾವಿ, ಚಿಕ್ಕಬಳ್ಳಾಪುರ, ಧಾರವಾಡ, ಕಲಬುರ್ಗಿ, ಬೀದರ್, ರಾಯಚೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ 80 ಶಿಕ್ಷಕರು ಅತ್ಯುತ್ತಮ ಆಯ್ದ ಮಾದರಿಗಳೊಂದಿಗೆ ಬರಲಿದ್ದಾರೆ. ಉತ್ತಮವಾದ 35 ವಿಜ್ಞಾನ ಮಾದರಿಗಳು ಈ ಕಾರ್ಯಾಗಾರದಲ್ಲಿ ಪ್ರದರ್ಶನ ಮಾಡಲಾಗುವುದು. ಅತ್ಯುತ್ತಮ ವಿಜ್ಞಾನ ಮಾದರಿಗೆ ₹ 40000 ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಈ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ವಿಜ್ಞಾನ ಅಥವಾ ಗಣಿತ ಶಾಖೆಯ ಯಾವುದಾದರೊಂದು ನಿರ್ದಿಷ್ಟ ಪರಿಕಲ್ಪನೆಗಳನ್ನು ಆಯ್ದುಕೊಳ್ಳಬಹುದು. ಜೀವಿಗಳ ವರ್ತನೆಗಳಲ್ಲಿ ಕಂಡು ಬರುವ ಬದಲಾವಣೆಗಳು, ಪೌಷ್ಟಿಕಾಂಶದ ಕೊರತೆ, ಸೊಂಕುಗಳ ಮುಂತಾದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸೂಚಿಸುವ ದಿಸೆಯಲ್ಲಿ ಪರಿಕಲ್ಪನೆಗಳನ್ನು ತಯಾರಿಸಬಹುದು. ಪ್ರತಿಯೊಂದು ಮಾದರಿಯ ಪ್ರದರ್ಶನಕ್ಕೆ ನಿರ್ದಿಷ್ಟ ಕ್ಷೇತ್ರದ ಸ್ಥಳಾವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !