ಬಾಯಲ್ಲಷ್ಟೇ ಪಾರದರ್ಶಕ ಮಂತ್ರ!

7

ಬಾಯಲ್ಲಷ್ಟೇ ಪಾರದರ್ಶಕ ಮಂತ್ರ!

Published:
Updated:

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ಪಾರದರ್ಶಕ ಆಡಳಿತದ ಮಂತ್ರವನ್ನು ಪಠಿಸುತ್ತಿದ್ದಾರೆ. ಇನ್ನೊಂದೆಡೆ, ಅವರ ದಿನಚರಿಯ ಸಾಮಾನ್ಯ ಮಾಹಿತಿ ನೀಡುವುದಕ್ಕೂ ಮುಖ್ಯಮಂತ್ರಿ ಸಚಿವಾಲಯ ನಿರಾಕರಿಸಿದೆ.

ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ದಿನದಿಂದ (ಮೇ 23) ಇಲ್ಲಿಯವರೆಗೆ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬ ವಿವರಗಳನ್ನು ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು.

‘ಈ ವಿವರಗಳು ಮಾಹಿತಿ ಹಾಗೂ ದಾಖಲೆ ಪದದ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂಬ ನೆಪ ಹೇಳಿ ಸಚಿವಾಲಯದ ಪ್ರಥಮ ಮೇಲ್ಮನವಿ ಅಧಿಕಾರಿ ಪಿ.ಎ.ಗೋಪಾಲ್‌ ಅವರು ಅರ್ಜಿಯನ್ನು ತಿರಸ್ಕರಿಸಿ ಪ್ರಕರಣ ಮುಕ್ತಾಯಗೊಳಿಸಿದ್ದಾರೆ.

‘ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಕೂಡಲೇ ಕುಮಾರಸ್ವಾಮಿ ಭೇಟಿ ನೀಡಿರಲಿಲ್ಲ. ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಗಳ ಸುತ್ತಾಟದಲ್ಲಿ ತಲ್ಲೀನರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಟೀಕೆ ಮಾಡಿದ್ದರು. 3 ದಿನಗಳ ಬಳಿಕವಷ್ಟೇ ಮುಖ್ಯಮಂತ್ರಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಿದ್ದರು. ಅದೇ ಹೊತ್ತಿಗೆ, ರಾಜ್ಯದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ, ಅವರ ಭೇಟಿಯ ವಿವರ ಕೋರಿ ಆಗಸ್ಟ್‌ 18ರಂದು 13 ಅರ್ಜಿಗಳನ್ನು ಸಲ್ಲಿಸಿದೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

‘ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಮಾಹಿತಿ ನೀಡಬೇಕು. ಆದರೆ, ಸಚಿವಾಲಯವು ಈ ಅವಧಿಯಲ್ಲಿ ವಿವರ ನೀಡಿರಲಿಲ್ಲ. ಹೀಗಾಗಿ, ಪ್ರಾಧಿಕಾರಕ್ಕೆ ಸೆಪ್ಟೆಂಬರ್‌ 19ರಂದು ಮೇಲ್ಮನವಿ ಸಲ್ಲಿಸಿದೆ. ಕಾಯ್ದೆಯಲ್ಲಿರುವ ನಿಯಮದ ಪ್ರಕಾರ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಮೇಲ್ಮನವಿ ಅಧಿಕಾರಿ ಪ್ರತಿಕ್ರಿಯಿಸಿದರು.

‘ಭೇಟಿ ವಿವರದ ದಾಖಲೆಗಳು ಬೇಡ. ಅವುಗಳ ಸಂಖ್ಯೆಯಯನ್ನಷ್ಟೇ ನೀಡಿ’ ಎಂದು ಅ.‌1ರಂದು ಮತ್ತೊಂದು ಅರ್ಜಿಹಾಕಿದೆ. ಈ ಸಂಬಂಧ ಅ. 15ಹಾಗೂ 30ರಂದು ವಿಚಾರಣೆ ನಡೆಸಿನಾನು ಕೋರಿದ ವಿವರ ನೀಡಲು ಮತ್ತೆ ನಿರಾಕರಿಸಿದರು. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !