ಅಂಗನವಾಡಿ ಬಂದ್ ಮಾಡಿ ಮುಷ್ಕರಕ್ಕೆ ಬನ್ನಿ

7
ಅಂಗನವಾಡಿ ನೌಕರರ ಸಂಘದ ಶಾಂತಾ ಘಂಟೆ ಮನವಿ

ಅಂಗನವಾಡಿ ಬಂದ್ ಮಾಡಿ ಮುಷ್ಕರಕ್ಕೆ ಬನ್ನಿ

Published:
Updated:
Deccan Herald

ವಿಜಯಪುರ: ನಗರದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ರಾಜ್ಯ ಅಂಗನವಾಡಿ ನೌಕರರ ಸಂಘದ ವಿಜಯಪುರ ತಾಲ್ಲೂಕು ಘಟಕದ 3ನೇ ಸಮ್ಮೇಳನ ನಡೆಯಿತು.

ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಶಾಂತಾ ಘಂಟೆ ಮಾತನಾಡಿ, ಕನಿಷ್ಠ ಕೂಲಿ ₹ 18000 ನೀಡುವುದು, ಕಾಯಂಗೊಳಿಸುವುದು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ, 2019ರ ಜನವರಿ 8, 9ರಂದು ನಡೆಯಲಿರುವ ಭಾರತ ಬಂದ್‌ ಬೆಂಬಲಿಸಿ, ಅಂಗನವಾಡಿಗಳನ್ನು ಬಂದ್ ಮಾಡಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಸುನಂದಾ ನಾಯಿಕ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿದರು. ಇದೇ ವೇಳೆ ರಾಜ್ಯ ಅಂಗನವಾಡಿ ನೌಕರರ ಸಂಘದ ನೂತನ ಸಮಿತಿ ರಚಿಸಲಾಯಿತು.

ದ್ರಾಕ್ಷಾಯಣಿ, ಅಣ್ಣಾರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಗೀತಾ ಜಾಧವ, ಸಂಗೀತಾ, ದುಂಡಮ್ಮ, ಎಸ್.ಎಂ.ಜಮಾದಾರ, ಚನ್ನಮ್ಮ ಖಾನಾಪುರ, ಮಂಜುಳಾ ಪತ್ತಾರ, ರಾಜೇಶ್ವರಿ, ಛಾಯಾ ತಬಸುಮ, ದೊಡ್ಡವ್ವ, ಸಿದ್ದಮ್ಮ, ಲಲಿತಾ ಪೋಳ, ಶಾಲಿನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !