‘ಕಾರ್ಟೂನ್‌ನೆಸ್ಟ್’ನ ಗೋಡೆಗಳ ತುಂಬ ಓರೆಕೋರೆ ಗೆರೆಗಳ ಚಿತ್ರಗಳು. ಗೆರೆಗಳಲ್ಲಿ ತಿಳಿಹಾಸ್ಯವಿದ್ದರೂ ಒಳಗೆ ಚಿಂತನೆಗೆ ಹಚ್ಚುವ ತಿರುಳು ಇದೆ. ವಿಡಂಬನಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುವ ಈ ‘ಗೂಡು’ ಈಗ ಕಲಾಪ್ರಿಯರು ಭೇಟಿ ನೀಡುವ ತಾಣವೂ ಆಗಿದೆ.
ಇದುವೇ ಕಾರ್ಟೂನ್ ಗೂಡು
ಕಲಾವಿದ ಪ್ರಕಾಶ್ ಶೆಟ್ಟಿ
ಕೈ ತೊಳೆಯುವ ಜಾಗದ ಕನ್ನಡಿ ಪಲ್ಲಕ್ಕಿಯಾಗುವ ಬಗೆ
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
‘ಸಾಧಾರಣ ಮನೆಯ ಅಸಾಧಾರಣ ಮಾಡಿದೆ’
ಇದೊಂದು ಆರ್ಟ್ ಗ್ಯಾಲರಿ ಇದ್ದಂತೆ. ವರ್ಷಗಳ ಕಾಲ ಹೀಗೆಯೇ ಉಳಿಯುತ್ತದೆ. ಗೋಡೆಗೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಿದ್ದರಿಂದ ಚಿತ್ರ ಬಿಡಿಸಲು ಅನುಕೂಲ ಆಗಿದೆ. ಕೆಲವು ಹೋಟೆಲ್‌ಗಳಲ್ಲಿ ಈ ರೀತಿ ಚಿತ್ರಗಳನ್ನು ಬಿಡಿಸಿದ್ದೇನೆ. ನನ್ನ ಸಾಧಾರಣ ಮನೆಯನ್ನು ಅಸಾಧಾರಣ ಮಾಡಬೇಕು ಎಂಬ ಅಭಿಲಾಷೆಯಿಂದ ಈ ರೀತಿ ಮಾಡಿದ್ದೇನೆ. ಎಐಯಂಥ ತಂತ್ರಜ್ಞಾನ ಬಂದಿದೆ. ಇನ್ನು ಸ್ವಲ್ಪ ವರ್ಷ ಕಳೆದರೆ ಇದನ್ನೆಲ್ಲ ಕೈಯಲ್ಲಿ ಬರೆದಿದ್ದಾ ಎಂದು ಕೇಳುವವರನ್ನು ಕಂಡರೆ ಅಚ್ಚರಿಪಡಬೇಕಾದದ್ದಿಲ್ಲ.
–ಪ್ರಕಾಶ್ ಶೆಟ್ಟಿ ಕಲಾವಿದ
ಮನೆಯ ಕಿಟಕಿಯ ಬಳಿ ನಾಟಕದ ಗ್ರೀನ್ ರೂಮ್. ನಿರ್ದೇಶಕ ಪರದೆ ಸರಿಸಿ ಪ್ರೇಕ್ಷಕರತ್ತ ಇಣುಕುತ್ತಿದ್ದಾನೆ. ಕಿಟಿಕಿ ಪರದೆಯನ್ನೂ ಸೇರಿಸಿಕೊಂಡು ಬರೆದಿರುವ ಚಿತ್ರ