ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದಂಗ ವಾದಕ ರಾಜಗೋಪಾಲ್‌ ನಿಧನ

Published 22 ನವೆಂಬರ್ 2023, 18:25 IST
Last Updated 22 ನವೆಂಬರ್ 2023, 18:25 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಮೃದಂಗ ವಾದಕ ವಿದ್ವಾನ್‌ ವಿ.ಎಸ್‌. ರಾಜಗೋಪಾಲ್‌ (87) ಅವರು ಬುಧವಾರ ಬೆಳಿಗ್ಗೆ 7.30 ಗಂಟೆಗೆ ನಿಧನರಾದರು. ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.

ಆಕಾಶವಾಣಿಯ ಟಾಪ್‌ ಗ್ರೇಡ್‌ ಕಲಾವಿದರಾಗಿದ್ದ ಅವರು ಸುಮಾರು ಇಪ್ಪತ್ತು ವರ್ಷಗಳ ಕಾಲ (1976–1996) ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು.

ನಾಡಿನ ಹಿರಿಯ ಕಲಾವಿದರಾಗಿದ್ದ ವಿದ್ವಾನ್ ಆರ್‌.ಕೆ. ಶ್ರೀಕಂಠನ್‌, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ನಾಗಮಣಿ ಶ್ರೀನಾಥ್, ಡಿ. ಬಾಲಕೃಷ್ಣ, ಎಸ್‌. ಶಂಕರ್‌ ಮುಂತಾದವರ ಕರ್ನಾಟಕ ಶಾಸ್ತ್ರೀಯ ಗಾಯನಕ್ಕೆ ಮೃದಂಗ ಪಕ್ಕವಾದ್ಯ ನುಡಿಸಿ ಹೆಸರಾಗಿದ್ದರು.

ಮೈಸೂರು ದಸರಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ‘ಆಸ್ಥಾನ ವಿದ್ವಾನ್‌’ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT