ಉಗ್ರರ ದಾಳಿಯಿಂದ ಕಾಶ್ಮೀರದ ಪಹಲ್ಗಾಮ್ನ ಜನರ ಬದುಕು ದುಸ್ತರವಾಗಿದೆ. ಅಲ್ಲಿನ ಆತಂಕದ ಪರಿಸರದಲ್ಲಿ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಿ ಒಂದಿಷ್ಟು ಭರವಸೆ ತುಂಬಿದ್ದಾರೆ.

ಉತ್ತರದ ತುತ್ತತುದಿಯಲ್ಲಿ ಕನ್ನಡದ ಬೃಹತ್ ಬಾವುಟ ಹಾರಾಡಿತು. ಡೊಳ್ಳು ಕುಣಿತ, ಯಕ್ಷಗಾನದ ಪ್ರದರ್ಶನದಿಂದ ಕರ್ನಾಟಕದ ಸಂಸ್ಕೃತಿ ಅನಾವರಣಗೊಂಡಿತು. ಮೈಕೊರೆಯುವ ಚಳಿಯಲ್ಲೂ ಕನ್ನಡ ಸಂಸ್ಕೃತಿಯ ಸೊಗಡು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಸರಿಸಿತು. ರಾಷ್ಟ್ರಗೀತೆಯೊಂದಿಗೆ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ...’ಯೂ ಮೊಳಗಿತು. ಕನ್ನಡ ಡಿಂಡಿಮವೂ ಮಾರ್ದನಿಸಿತು. ಇದಕ್ಕೆ ವಿಶೇಷ ಕಾರಣವೂ ಇತ್ತು.

ಕರ್ನಾಟಕ ರಾಜ್ಯೋತ್ಸವವನ್ನು ಹೊರ ರಾಜ್ಯ, ವಿದೇಶಗಳಲ್ಲಿರುವ ಕನ್ನಡ ಸಂಘ–ಸಂಸ್ಥೆಗಳು ಆಚರಿಸುವುದು ಮಾಮೂಲಿ. ಆದರೆ, ಕನ್ನಡದ ಗಂಧ–ಗಾಳಿಯೇ ಇಲ್ಲದ ಪಹಲ್ಗಾಮ್ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದು ಸಾಹಸವೇ ಸರಿ. ಪಹಲ್ಗಾಮ್ ಎಂದ ಕೂಡಲೇ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಅಟ್ಟಹಾಸವೇ ನೆನಪಾಗುತ್ತದೆ. ಅಲ್ಲಿ ಇನ್ನೂ ಆತಂಕದ ಛಾಯೆ ಮಾಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲೂ, ಮೂರು ಸಾವಿರ ಕಿಲೋಮೀಟರ್ ಪಯಣಿಸಿದ ಬೆಂಗಳೂರಿನ ಕನ್ನಡಿಗರು ಕನ್ನಡದ ಕಂಪನ್ನು ಅಲ್ಲಿ ಹರಡಿದರು.

ಕಾಶ್ಮೀರದಲ್ಲಿ ಡಿಸೆಂಬರ್ ಮಧ್ಯಭಾಗದಿಂದ ಹಿಮ ಬೀಳುವುದಕ್ಕೆ ಆರಂಭವಾಗುತ್ತದೆ. ಆದರೆ, ನವೆಂಬರ್ನಲ್ಲಿ ಅದಕ್ಕೆ ವೇದಿಕೆ ಸಿದ್ಧವಾಗಿರುತ್ತದೆ. ಇಷ್ಟಾದರೂ, ಪಹಲ್ಗಾಮ್ನಲ್ಲಿ 2 ಡಿಗ್ರಿ ಸೆಲ್ಸಿಯಸ್ ವಾತಾವರಣವಿತ್ತು. ಇಂಥ ಸ್ಥಳದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರ ಪಾಲಿಕೆಗಳ ಅಧಿಕಾರಿ– ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.

‘ಉಗ್ರರ ದಾಳಿಯಲ್ಲಿ ಮಡಿದವರಿಗೆ ಆ ಜಾಗದಲ್ಲೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂಬುದು ನಮ್ಮ ಆಶಯವಾಗಿತ್ತು. ಅಲ್ಲದೆ, ಕರ್ನಾಟಕ ರಾಜ್ಯೋತ್ಸವ ಆಚರಿಸುವ ಜೊತೆಗೆ ಕನ್ನಡದ ಸಂಸ್ಕೃತಿಯನ್ನು ಇಲ್ಲಿ ಬಿಂಬಿಸುವ ಉದ್ದೇಶವೂ ಇತ್ತು. ಹೀಗಾಗಿಯೇ 450ಕ್ಕೂ ಹೆಚ್ಚು ಜನ ಬೆಂಗಳೂರಿನಿಂದ ಪಹಲ್ಗಾಮ್ಗೆ ಹೋಗಿ ಕಾರ್ಯಕ್ರಮ ಮಾಡಿದೆವು. ಉಗ್ರರ ದಾಳಿಗೆ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಜೊತೆಗೆ, ಹಳದಿ– ಕೆಂಪು ಬಾವುಟ ಹಾರಿಸಿ, ಸಿಂಧೂರ ಕಾರ್ಯಾಚರಣೆಯನ್ನು ಅಭಿನಂದಿಸಿದೆವು. ಸ್ಥಳೀಯ ಆಡಳಿತ, ಪೊಲೀಸರು, ಸೈನ್ಯದ ಅಧಿಕಾರಿಗಳ ಬೆಂಬಲದಿಂದ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿತು’ ಎಂದು ಸಂಘದ ಅಧ್ಯಕ್ಷ ಎ. ಅಮೃತ್ರಾಜ್ ಹೇಳುವಾಗ ಅವರ ಮುಖದಲ್ಲಿ ಧನ್ಯತಾಭಾವವಿತ್ತು.

‘ನಮಗೆ ಕನ್ನಡ ಭಾಷೆ ಅರ್ಥವಾಗದಿದ್ದರೂ, ಎರಡೂವರೆ ತಾಸಿನ ಕಾರ್ಯಕ್ರಮವನ್ನು ವೀಕ್ಷಿಸಿದೆವು. ಮೃತರಿಗೆ ಶ್ರದ್ಧಾಂಜಲಿ, ಸೈನಿಕರಿಗೆ ಅಭಿನಂದನೆ ಹಾಗೂ ಇಲ್ಲಿ ಪ್ರವಾಸೋದ್ಯಮ ವೃದ್ಧಿಯಾಗಲು ಕನ್ನಡಿಗರು ಮಾಡುತ್ತಿರುವ ಕೆಲಸ ಮನಸ್ಸಿಗೆ ತಟ್ಟಿತು’ ಎಂದು ಪಹಲ್ಗಾಮ್ನ ಡಿವೈಎಸ್ಪಿ ಫಾರೂಕ್ ಅಹಮದ್, ಇನ್ಸ್ಪೆಕ್ಟರ್ ಪರ್ವೇಜ್ ಅಹಮದ್ ಅವರು ಕಾರ್ಯಕ್ರಮದ ಕೊನೆಯಲ್ಲಿ ಹೇಳಿದರು. ಸೈನಿಕರು ಸೇರಿದಂತೆ ಸ್ಥಳೀಯರು ಮಾಡಿದ ಕರತಾಡನ, ಕನ್ನಡಿಗರ ಕಾರ್ಯಕ್ರಮದ ಯಶಸ್ಸನ್ನು ಸಾರಿ ಹೇಳಿತು.

2025ರ ಏಪ್ರಿಲ್ 22 ರಂದು ಉಗ್ರರು 26 ಪ್ರವಾಸಿಗರನ್ನು ಹತ್ಯೆ ಮಾಡಿದ ಬೈಸರನ್ ಕಣಿವೆಯಿಂದ ಮೂರು ಕಿಲೋಮೀಟರ್ ದೂರವಿರುವ ಪಹಲ್ಗಾಮ್ ಕ್ಲಬ್ ಆ್ಯಂಡ್ ಕನ್ವೆಂಷನ್ ಸೆಂಟರ್ನಲ್ಲಿ ರಾಜ್ಯೋತ್ಸವ ನಡೆಯಿತು. ಬೈಸರನ್ ಕಣಿವೆಯಲ್ಲಿ ಹತ್ಯೆಯಾದ ಅಷ್ಟೂ ಮಂದಿಯ ದೇಹವನ್ನು ಈ ಕ್ಲಬ್ನಲ್ಲೇ ಇರಿಸಲಾಗಿತ್ತು. ಆ ಸ್ಥಳದಲ್ಲಿಯೇ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜಿಬಿಎ ಸಿಬ್ಬಂದಿ, ಸಾಂತ್ವನ–ಭರವಸೆಯ ಮಾತುಗಳನ್ನಾಡಿದರು.

ಉಗ್ರರ ಅಟ್ಟಹಾಸದ ಘಟನೆಯಿಂದ ಪಹಲ್ಗಾಮ್ ಇನ್ನೂ ಹೊರಬಂದಿಲ್ಲ. ಪ್ರವಾಸಿಗರು ಇಲ್ಲಿಗೆ ಬರಲು ಹೆದರುತ್ತಿದ್ದಾರೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಇಲ್ಲಿನ ನಿವಾಸಿಗಳು ನೇಯುವ ಶಾಲು, ಸ್ವೆಟರ್ಗಳನ್ನು ಖರೀದಿಸಲು ಜನ ಬಾರದ್ದರಿಂದ ಅವರ ಆರ್ಥಿಕ ಸ್ಥಿತಿ ಕುಸಿದಿದೆ. ‘ಆರು ತಿಂಗಳಿಂದ ಸಾಕಷ್ಟು ಕಷ್ಟ ಪಡುತ್ತಿದ್ದೇವೆ. ನಾವು ನೇಯ್ದಿರುವ ಶಾಲುಗಳೆಲ್ಲ ಮನೆಯಲ್ಲೇ ಇವೆ. ಉಗ್ರರ ಕೃತ್ಯ ನಮ್ಮನ್ನು ದುಃಸ್ಥಿತಿಗೆ ದೂಡಿದೆ. ಪ್ರವಾಸಿಗರು ಯಾವಾಗ ಹಿಂದಿನಂತೆಯೇ ಬರುತ್ತಾರೋ ಗೊತ್ತಿಲ್ಲ’ ಎಂದು ಶಾಲು ಮಾರಾಟಗಾರ ಶಾಜ್ಜಿದ್ ಹೇಳುವಾಗ ಕಣ್ಣಂಚು ತೇವಗೊಂಡಿತ್ತು.

‘ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಶ್ರೀನಗರಕ್ಕೆ ವಿಮಾನದಲ್ಲಿ ಬಂದಿಳಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ನವೆಂಬರ್ 19 ರಿಂದ ಇಲ್ಲಿಗೆ ಬರುವ ಮೂರ್ನಾಲ್ಕು ವಿಮಾನಗಳಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿಗರು ಬಂದರು. ಇದಕ್ಕೆ ಕಾರಣ ಮೊದಲಿಗೆ ಗೊತ್ತಾಗಲಿಲ್ಲ. ಆಮೇಲೆ ಪರಿಶೀಲಿಸಿದಾಗ, ಪಹಲ್ಗಾಮ್ನಲ್ಲಿ ಕರ್ನಾಟಕದವರು ಬಂದು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು. ಶ್ರೀನಗರ ವಿಮಾನ ನಿಲ್ದಾಣ ಅತ್ಯಂತ ಚಿಕ್ಕದು. ಆದರೂ ಪ್ರವಾಸಿಗರ ಕೊರತೆ ಇತ್ತು. ಇನ್ನು ಮುಂದಾದರೂ ಪ್ರವಾಸಿಗರು ಎಂದಿನಂತೆ ಬರುವಂತಾಗಲಿ’ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ಶೋರಾ ಆಶಿಸಿದರು.

‘ಶ್ರೀನಗರಕ್ಕೆ ಬಂದಿಳಿಯುವ ಪ್ರವಾಸಿಗಳು ಗುಲ್ ಮಾರ್ಗ್, ಸೋನ್ ಮಾರ್ಗ್ ಕಡೆಗೆ ಮಾತ್ರ ಪ್ರಯಾಣ ಮಾಡುತ್ತಿದ್ದರು. ಆ್ಯಪಲ್ ವ್ಯಾಲಿಯನ್ನು ಸಮೀಪವೇ ಹೊಂದಿರುವ ಪಹಲ್ಗಾಮ್ ಕಡೆಗೆ ಹೋಗುವವರು ಕಡಿಮೆಯಿದ್ದರು. ಹೀಗಾಗಿ ಬಾಡಿಗೆ ವಾಹನಗಳೆಲ್ಲ ಮನೆಗಳ ಮುಂದೆ ನಿಂತಿದ್ದವು. ಆದರೆ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ, ಸುಮಾರು 200 ವಾಹನಗಳು ನಾಲ್ಕೈದು ದಿನದಿಂದ ಪಹಲ್ಗಾಮ್ಗೆ ಸಂಚರಿಸಿವೆ. ನಮಗೆ ಖುಷಿಯಾಗಿದೆ’ ಎಂದು ಟ್ರಾವೆಲ್ಸ್ ಏಜೆನ್ಸಿ ಉಮರ್ ರಂಜಾನ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

ಕನ್ನಡಿಗರ ಇಂತಹ ನಡೆ ಕಾಶ್ಮೀರಿಗಳಲ್ಲಿ ಸ್ವಲ್ಪವಾದರೂ ಭರವಸೆಯನ್ನು ಮೂಡಿಸಿತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರ ಪಾಲಿಕೆಗಳ ಅಧಿಕಾರಿ– ನೌಕರರ ಕ್ಷೇಮಾಭಿವೃದ್ಧಿ ಸಂಘ ಅಭಿನಂದಗೆ ಅರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.