ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲು ಮಾತಾಡುತ್ತದೆ...

ಅಕ್ಷರ ಗಾತ್ರ

ಸುಮ್ಮನೆ ಕೂತು
ದಿಟ್ಟಿಸುತ್ತೇನೆ
ಇರುಳಲ್ಲಿ ಕಾಡುವ ಅಗಾಧ ಕಡಲನ್ನು...

ನಿಡುಸುಯ್ಯುವ ನಿಟ್ಟುಸಿರು
ಕೇಳಿಸುತ್ತದೆ ನನಗೆ.
ನಾನು ಹುಡುಕುವ ಹಾಗೆ ಕಡಲೂ
ಹುಡುಕುತ್ತಿದೆ ಯಾರನ್ನೋ...
ಒಂದು ದಿನ ನನ್ನ
ಜೊತೆ ಕಡಲು
ಮಾತಾಡಬಹುದೆಂದು ಕಣ್ಣು ಕಿವಿ–
ಯಾಗಿಸಿ, ರಾತ್ರಿಗಳನ್ನು
ಎಚ್ಚರ–ಮಂಪರಿನಲ್ಲಿ
ಕಳೆಯುತ್ತೇನೆ.
ಕಡಲು ಅಳುತ್ತಿರುವ ಹಾಗೆ ಕೇಳಿಸುತ್ತದೆ,
ನನಗೆ ಭ್ರಮೆ;
ಅಳುತ್ತಿರುವುದು ಕಡಲಲ್ಲ,

ನಾನು. ಕಡಲು
ನನ್ನ ಸಂತೈಸುತ್ತಿದೆ. ಬಂದು ಹೋಗುವ
ಚುಕ್ಕಿ, ನಿಹಾರಿಕೆ–
ಗಳನ್ನು ಪ್ರೀತಿಸುವ ನನ್ನ
ಕಂಡ ಕಡಲು ಹೇಳುತ್ತದೆ, ಮೀನಿನ ಜೊತೆ ಅನ್ನವೂ
ಬೇಕು ನಿನಗೆ. ನಾನು
ಮೀನು ಮಾತ್ರ ಬೆಳೆಯುತ್ತೇನೆ,
ರೈತನೊಬ್ಬ ಇತ್ತ
ಬಂದಾನೆಂದು ಹಗಲು ಇರುಳೂ
ಕಾಯುತ್ತಿದ್ದೆನೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT