ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕಾಲಿಗೆರಗಿ ನಮಸ್ಕರಿಸಿದ ಪ್ರತಾಪ ಸಿಂಹ

ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಸಿಂಹ ಭಾಗಿಯಾದಾಗ ಘಟನೆ ನಡೆಯಿತು
Published 11 ಮೇ 2024, 15:59 IST
Last Updated 11 ಮೇ 2024, 15:59 IST
ಅಕ್ಷರ ಗಾತ್ರ

ಮೈಸೂರು: ‘ರಾಜಕಾರಣದಲ್ಲಿ ಸ್ವಂತ ಶಕ್ತಿಯ ಮೇಲೆ ಬೆಳೆದು ಅಧಿಕಾರ ಹಿಡಿಯುವವರ ಪೀಳಿಗೆ ಮುಗಿಯುತ್ತಾ ಬರುತ್ತಿದೆ. ಈಗಿನವರು ಒಂದಿಲ್ಲೊಂದು ಶಕ್ತಿಯನ್ನು ಪಡೆದುಕೊಂಡೇ ಬರುತ್ತಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ಮಾರ್ಮಿಕವಾಗಿ ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತ‍ಪ್ಪಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ, ಯಡಿಯೂರಪ್ಪ, ಎಚ್‌.ಡಿ.ದೇವೇಗೌಡ, ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ನೆಲದಿಂದ ಎದ್ದು ಬಂದವರು. ಸ್ವಂತ ಶಕ್ತಿಯ ಮೇಲೆ ಹೋರಾಟದ ಬಲದಿಂದ ಬಂದು ರಾಜಕಾರಣದಲ್ಲಿ ಪ್ರಭುತ್ವವನ್ನು ಸಾಧಿಸಿದವರು. ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿದು ಜನರಿಗೆ ನೆರವಾಗುವ ಕೆಲಸ ಮಾಡಿದ ಪೀಳಿಗೆ ಬಹುಶಃ ನಿಮಗೇ ಕೊನೆಯಾಗಲಿದೆ. ನೀವೆಲ್ಲರೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಹಾಗೂ ದಾರಿದೀಪವಾಗಿದ್ದಾರೆ’ ಎಂದರು.

ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿದ್ದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ಸಮ್ಮುಖದಲ್ಲೇ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರನ್ನು ಪ್ರತಾಪ ಸಿಂಹ ಹೊಗಳಿದ್ದಲ್ಲದೇ ವೇದಿಕೆಗೆ ಸಿದ್ದರಾಮಯ್ಯ ಬರುತ್ತಿದ್ದಂತೆಯೇ ಕಾಲಿಗೆರಗಿ ನಮಸ್ಕರಿಸಿದರು. ಸಿದ್ದರಾಮಯ್ಯ ಕೂಡ ಬೆನ್ನು ತಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT