ಗುರುವಾರ, 1 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಇಂದು ದೂರಾಗುವುದು
Published 31 ಡಿಸೆಂಬರ್ 2025, 22:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಧಿಕಾರಿಗಳ ಭೇಟಿಯಿಂದ ಕಾರ್ಯ ಸಾಧನೆಗೆ ಅನುವು. ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿದ್ದು, ಮನಸ್ಸಿಗೆ ನೆಮ್ಮದಿ ಇರುವುದು. ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ವ್ಯಾಪಾರದಲ್ಲಿ ಚತುರ ನಡೆ ಇರಲಿ.
ವೃಷಭ
ಮುಕ್ತಾಯ ಹಂತದ ಯೋಜನೆಗಳು ನಿಮ್ಮ ಗಡಿಬಿಡಿಯಿಂದಾಗಿ ವ್ಯತ್ಯಾಸವಾಗಬಹುದು. ನೂತನವಾಗಿ ಹೂಡಿಕೆ ಸದ್ಯಕ್ಕೆ ಉತ್ತಮವಲ್ಲ. ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಉಂಟಾಗುವುದು.
ಮಿಥುನ
ಈ ದಿನ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಬಹಳ ದಿನಗಳಿಂದ ಕಾಡುತ್ತಿದ್ದ ನಿಮ್ಮ ಸಮಸ್ಯೆಯೊಂದು ಇಂದು ದೂರಾಗುವುದು.
ಕರ್ಕಾಟಕ
ನಿಮ್ಮಲ್ಲಿರುವ ಮಾತಿನ ಚತುರತೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ದೇಹದಲ್ಲಿ ವಾಯು ಪೀಡೆ ಹೆಚ್ಚಾಗುವುದ ರಿಂದ ಕಿರಿಕಿರಿ ಎನಿಸಲಿದೆ. ರಸಗೊಬ್ಬರದ ವ್ಯಾಪಾರ ಮಾಡುವವರಿಗೆ ಲಾಭ.
ಸಿಂಹ
ಅಣ್ಣ ತಮ್ಮಂದಿರ ನಡುವಿನ ವಿಚಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಮನೆ ಬದಲಾಯಿಸುವ ಯೋಚನೆ ಮಾಡಬೇಕಾಗಲಿದೆ.
ಕನ್ಯಾ
ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ಶಿಕ್ಷಕಿಯೊಬ್ಬರು ಸಹಾಯ ಮಾಡುವರು. ವಿದೇಶ ವ್ಯವಹಾರಗಳಿಂದ ಆದಾಯ ಕೈಗೂಡಲಿದೆ. ನಿವೃತ್ತ ಶಿಕ್ಷಕರಿಗೆ ಗೌರವಯುತ ಸ್ಥಾನಮಾನ ಸಿಗಲಿದೆ.
ತುಲಾ
ಗಣಿತಶಾಸ್ತ್ರಜ್ಞರಿಗೆ, ಆಧ್ಯಾತ್ಮ ಚಿಂತಕರಿಗೆ ಈ ದಿನ ಅತ್ಯಂತ ವಿಶೇಷವಾದ ದಿನವೆನಿಸಲಿದೆ. ಸತ್ಕಾರ್ಯಗಳಲ್ಲಿ ಬಂಧುಗಳುಸಹಕರಿಸುವರು. ಕನಸುಗಳು ಕೈಗೂಡುವ ದಿನ ಇದಾಗಿದೆ.
ವೃಶ್ಚಿಕ
ಯಾವುದೇ ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಹೆಗಲಿಗೇರಿಸಿಕೊಳ್ಳಿ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರಕುವುದು. ಕೃಷಿಯಲ್ಲಿ ಬೇಸಾಯದ ಕೆಲಸಗಳಿಂದಾಗಿ ಹೆಚ್ಚು ಖರ್ಚು
ಧನು
ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ಸಮಯ ಅಥವಾ ವಿಸ್ತೀರ್ಣವೂ ಹೆಚ್ಚುವುದು. ಆಹಾರದಲ್ಲಿ ಗುಣಮಟ್ಟ ಮತ್ತು ಶುಚಿತ್ವವನ್ನು ಕಾಪಾಡಿ. ಅನಗತ್ಯವಾಗಿ ನೀವು ಸಮಯವನ್ನು ವ್ಯರ್ಥ ಮಾಡದಿರಿ.
ಮಕರ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಾಗು ತಂದೆ-ತಾಯಿಯ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ. ಕುಟುಂಬದಲ್ಲಿ ನಿಮ್ಮ ಮೇಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಲಾಭವಿರುತ್ತದೆ
ಕುಂಭ
ಶಿಕ್ಷಕ ವೃತ್ತಿಯವರಿಗೆ ಮಕ್ಕಳ ಅಸಾಮಾನ್ಯ ಬುದ್ಧಿವಂತಿಕೆಯಿಂದಾಗಿ ತರಬೇತಿಯ ಅಗತ್ಯ ಕಾಣುವುದು. ಅಲಂಕಾರಿಕ ವಸ್ತುಗಳ ಮಾರಾಟ ಲಾಭವನ್ನು ತರುವುದು. ವೈಯಕ್ತಿಕ ಕೆಲಸಗಳಿಗೆ ಅಡಚಣೆ ಇರುವುದಿಲ್ಲ.
ಮೀನ
ದೂರದ ಸಂಚಾರ ತೋರಿಬಂದರೂ, ಅದನ್ನು ಮುಂದೂಡುವುದು ಅನಿವಾರ್ಯವಾಗುತ್ತದೆ. ಮನೆಗೆ ಬಂಧು ಮಿತ್ರರ ಆಗಮನ ನವ ಉಲ್ಲಾಸವನ್ನು ತರಲಿದೆ. ಇತರರ ಸಲಹೆಯನ್ನು ವಿಮರ್ಶಿಸದೇ ಒಪ್ಪಿಕೊಳ್ಳಬೇಡಿ.
ADVERTISEMENT
ADVERTISEMENT