ನವದೆಹಲಿ: 2026-2027ರ ಋತುವಿನಿಂದ ಕನಿಷ್ಠ 15 ವರ್ಷಗಳ ಅವಧಿಗೆ ಪುರುಷ ಮತ್ತು ಮಹಿಳಾ ಕ್ಲಬ್ ಸ್ಪರ್ಧೆಗಳ ವಾಣಿಜ್ಯ ಹಕ್ಕುಗಳಿಗಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಸೋಮವಾರ ಬಿಡ್ ಆಹ್ವಾನಿಸಿದೆ.

ಪುರುಷರ ಮತ್ತು ಮಹಿಳೆಯರ ಕ್ಲಬ್ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಎಐಎಫ್ಎಫ್ ಬಿಡ್ಡಿಂಗ್ನಲ್ಲಿ ಎರಡು ಪ್ಯಾಕೇಜ್ಗಳನ್ನು ನೀಡಿದೆ.

‘ಎ’ ಪ್ಯಾಕೇಜ್ನಲ್ಲಿ ಇಂಡಿಯನ್ ಸೂಪರ್ ಲೀಗ್ ಮತ್ತು ಫೆಡರೇಷನ್ ಕಪ್ ಒಳಗೊಂಡಿದೆ. ‘ಬಿ’ ಪ್ಯಾಕೇಜ್ನಲ್ಲಿ ಭಾರತ ಮಹಿಳಾ ಲೀಗ್ (ಐಡಬ್ಲ್ಯುಎಲ್) ಮತ್ತು ಐಡಬ್ಲ್ಯೂಎಲ್ 2 ಅನ್ನು ಒಳಗೊಂಡಿದೆ. ಬಿಡ್ದಾರರ ಆಯ್ಕೆಯ ಮೇರೆಗೆ ಮಹಿಳಾ ಫೆಡರೇಷನ್ ಕಪ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ.

ಇತ್ತೀಚೆಗೆ ಮರುನಾಮಕರಣಗೊಂಡ ಇಂಡಿಯನ್ ಫುಟ್ಬಾಲ್ ಲೀಗ್ನ (ಹಿಂದಿನ ಐ-ಲೀಗ್) ವಾಣಿಜ್ಯ ಹಕ್ಕುಗಳ ಬಿಡ್ ಅನ್ನು ಈ ಪ್ರಸ್ತಾವದಲ್ಲಿ ಸೇರಿಸಿಲ್ಲ.

‘ನಾವು ಕನಿಷ್ಠ 15 ವರ್ಷಗಳ ಅವಧಿಗೆ ವಾಣಿಜ್ಯ ಹಕ್ಕುಗಳನ್ನು ಬಯಸುತ್ತೇವೆ. ಬಿಡ್ದಾರರು ಒಪ್ಪಿದರೆ ಅದನ್ನು 20 ವರ್ಷಗಳವರೆಗೆ ವಿಸ್ತರಿಸಬಹುದು’ ಎಂದು ಎಐಎಫ್ಎಫ್ನ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮಾರ್ಚ್ 11ರಂದು ಬಿಡ್ ಪೂರ್ವ ಸಮ್ಮೇಳನವನ್ನು ನಿಗದಿಪಡಿಸಲಾಗಿದೆ. ಬಿಡ್ ಸಲ್ಲಿಕೆಗೆ ಮಾರ್ಚ್ 19 ಕೊನೆಯ ದಿನವಾಗಿದೆ. ಬಿಡ್ಗಳನ್ನು ಮಾರ್ಚ್ 20 ರಂದು ತೆರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.