ವೆಲೆನ್ಸಿಯಾ (ಸ್ಪೇನ್): ಭಾರತದ ಉದಯೋನ್ಮುಖ ರೇಸಿಂಗ್ ಪಟು ಅತೀಕಾ ಮೀರ್ ಅವರು ಚಾಂಪಿಯನ್ಸ್ ಆಫ್ ದಿ ಫ್ಯೂಚರ್ ಅಕಾಡೆಮಿ (ಸಿಒಟಿಎಫ್ಎ) ಸರಣಿಯ ಯುರೋಪ್ ಲೆಗ್ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡರು. ಈ ಪ್ರತಿಷ್ಠಿತ ರೇಸ್ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ರೇಸಿಂಗ್ ಪಟು ಎಂಬ ದಾಖಲೆಯನ್ನೂ ಸ್ಥಾಪಿಸಿದರು.

ಅತೀಕಾ, 15 ಸುತ್ತುಗಳಿದ್ದ ಈ ರೇಸ್ನಲ್ಲಿ ಎರಡನೆಯವರಾಗಿ ಸ್ಪರ್ಧೆ ಮುಗಿಸಿದರು. ಆದರೆ, ಸ್ಪರ್ಧಾ ನಂತರ ದಂಡದ ಅಂಕದಿಂದಾಗಿ ತೃತೀಯ ಸ್ಥಾನಕ್ಕೆ ಸರಿಯಬೇಕಾಯಿತು.

11 ವರ್ಷ ವಯಸ್ಸಿನ ಅತೀಕಾ ಅವರು ಮಿನಿ ವಿಭಾಗದಿಂದ ‘ಒಕೆಎನ್ಜೆ’ಗೆ (ಜೂನಿಯರ್) ಪ್ರವೇಶಿಸಿದ ನಂತರ ಮೊದಲ ಯಶಸ್ಸು ಸಾಧಿಸಿದ್ದಾರೆ. ಶ್ರೀನಗರದ ಬಾಲಕಿ ಸದ್ಯ ಎಫ್1 ಅಕಾಡೆಮಿಯ ‘ಡಿಸ್ಕವರ್ ಯುವರ್ ಡ್ರೈವ್’ ಅಭಿಯಾನದಡಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.