ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಯ ಕುವರಿ

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗುಲಾಬಿ ದುಪಟ್ಟಾ ಹೊದ್ದಿರುವ ಪುಟ್ಟಿ
ಕರಿ ಬುರ್ಖಾದ ಸೆರೆ ಹರಿದ ಗಟ್ಟಿಗಿತ್ತಿ
ಸ್ವಾತ್ ಕಣಿವೆಯಲಿ ನಳನಳಿಸಿದ ಹಸಿರು
ಸುಡುವ ಮರಳಿನಲೂ ಅರಳಿದ ಹೂವು

ಹೆಣ್ಣು ಓದಿನ ಕನಸು ಕಟ್ಟಿದ ಪುಟ್ಟಮರಿ
ಗಡಿಯಾಚೆಗೂ ಕೇಳಿಸಿದೆ ಹೋರಾಟದ ಪರಿ
ತಾಲಿಬಾನಿಗಳ ಆದೇಶಗಳ ಗಾಳಿಗೆ ತೂರಿ
ತಲೆಯೆತ್ತಿ ನುಡಿದೆ ಅಲ್ಲಾಹನ ಓದಷ್ಟೇ ಸರಿ

ನಡುರಾತ್ರಿ ಸ್ವಾತಂತ್ರ್ಯ ಪಡೆದ ನಿನ್ನ ನಾಡಿನಲಿ
ಮರಳ ರಾಶಿಯ ಮೇಲೆ ವಿದ್ಯಾಕ್ಷರ ಬರೆದೆ.
ನಡುಹಗಲಲಿ ಸಿಡಿದ ಬಂದೂಕಿಗೂ ಬೆದರದೆ,
ನೊಬೆಲ್ ಶಾಂತಿ ಪ್ರಶಸ್ತಿಗೆ ಹೊಸ ಹೆಸರಾದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT