ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ತಲೆ ಹಾಕಬೇಡಿ
Published 18 ಮೇ 2024, 23:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ವಿಶಿಷ್ಟ ರೀತಿಯ ವೃತ್ತಿ ಕೌಶಲ್ಯದ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಸಹೋದ್ಯೋಗಿಯೊಬ್ಬರು ಅಪೇಕ್ಷಿಸಲಿದ್ದಾರೆ. ಸಕುಟುಂಬ ಸಮೇತರಾಗಿ ಯಾವುದಾದರೂ ಶಕ್ತಿಪೀಠಕ್ಕೆ ಭೇಟಿ ನೀಡುವ ಯೋಚನೆ ಮಾಡಿ.
ವೃಷಭ
ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ತಲೆ ಹಾಕಬೇಡಿ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನ ತರಲಿದೆ. ಮಕ್ಕಳ ದುಡಿಮೆಯಿಂದ ಬರುತ್ತಿರುವ ಹಣದ ಮೂಲದ ಬಗ್ಗೆ ಗಮನಹರಿಸಿ.
ಮಿಥುನ
ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವ ಕೆಲಸ ನಡೆಯಲಿದೆ. ಜಾನುವಾರುಗಳ ಆರೋಗ್ಯ ನಿರ್ವಹಣೆಗಾಗಿ ಹಣ ವಿನಿಯೋಗ ಮಾಡಲಿದ್ದೀರಿ. ಓದುವುದರಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ಕರ್ಕಾಟಕ
ಸೋದರ ಮಾವನ ಸಹಾಯದಿಂದ ನಿಮ್ಮ ಕಟ್ಟಡ ನಿರ್ಮಾಣಕ್ಕೆ ಸಹಾಯವಾಗಬಹುದು. ಜಗಳ ಸರಿಪಡಿಸಲು ಹೋಗಿ ನೀವೇ ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಗಾಗಿ ಖರ್ಚು ಮಾಡುವಿರಿ.
ಸಿಂಹ
ವ್ಯಂಗ್ಯಚಿತ್ರ ಕಲಾವಿದರಿಗೆ ಮಾಸ ಪತ್ರಿಕೆಯ ಸಂಸ್ಥೆಯಿಂದ ಹೆಚ್ಚಿನ ಅವಕಾಶಗಳು ಸಿಗಲಿವೆ. ಬಾಲ್ಯದ ಮುಗ್ಧತೆಯಿಂದ ತಪ್ಪಿಸಿಕೊಂಡ ಹಲವಾರು ಅವಕಾಶಗಳನ್ನು ನೆನೆದು ಮರುಗುವಿರಿ. ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಲಿದೆ.
ಕನ್ಯಾ
ಮುತ್ತು ರತ್ನಗಳ ಆಭರಣದ ಖರೀದಿ ಮಾಡುವಾಗ ನಿಮ್ಮ ಸ್ನೇಹಿತೆಯ ಅಭಿರುಚಿ ನಿಮಗೆ ಸರಿ ಎನ್ನಿಸಬಹುದು. ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ ಇದೆ. ವಾತ-ಪಿತ್ತಗಳ ನಿರ್ಲಕ್ಷ್ಯ ಬೇಡ.
ತುಲಾ
ಅಭಿಪ್ರಾಯ ವಿನಿಮಯಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿ ಸೂಕ್ತ ತೀರ್ಮಾನ ಸಿಗಲಿದೆ. ಅದರಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗಲಿದೆ.
ವೃಶ್ಚಿಕ
ಮಾತನಾಡುವಾಗ ನೀವು ಬಳಸುವ ಪದಗಳಿಂದಾಗಿ ಇಂದು ಕೆಲವರು ನಿಮ್ಮ ವ್ಯಕ್ತಿತ್ವವನ್ನು ಲೆಕ್ಕ ಹಾಕುತ್ತಾರೆ. ಕೌಟುಂಬಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಕಾರ್ಯ ಪ್ರವೃತ್ತರಾಗುವಿರಿ
ಧನು
ಈ ದಿನ ನೀವು ಆಡಿದ ಮಾತುಗಳು ತಿರುಗಿ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ಇತರರಿಗೆ ಪ್ರಶ್ನಿಸಲಾಗದ ರೀತಿಯಲ್ಲಿ ಮಾತುಗಳನ್ನಾಡಿ, ನಿಮ್ಮ ಗೌರವ ಹಾಗೂ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವಿರಿ
ಮಕರ
ಮನೆಯಲ್ಲಿ ಅಲಂಕಾರಿಕ ವಸ್ತುಗಳ ಖರೀದಿಯಿಂದ ಅಧಿಕ ಖರ್ಚು ಬಂದೀತು. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚಗಳು ಆದಾಯದ ಮಿತಿಯೊಳಗಿರಲಿದೆ. ವ್ಯವಹಾರದಲ್ಲಿ ನಷ್ಟವಾಗಬಹುದು. ಜಾಗ್ರತೆ ವಹಿಸಿ.
ಕುಂಭ
ನಿಮ್ಮನ್ನು ಪ್ರೀತಿಸುವವರ ಮಾರ್ಗದರ್ಶನ ಈ ದಿನ ದೊರೆಯಲಿದ್ದು, ಹೊಸ ಚೈತನ್ಯ ಬರಲಿದೆ. ನಿಮ್ಮ ನಾಜೂಕಿನ ಕೆಲಸಗಳಿಂದಾಗಿ ವಿಶೇಷ ಮನ್ನಣೆ ಗಳಿಸುವಿರಿ. ನಿಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
ಮೀನ
ಅಧಿಕಾರಿ ಹಾಗೂ ಹಿರಿಯರಿಂದ ಸಹಾಯ ಸಹಕಾರ ಅಪೇಕ್ಷಿಸುವ ದಿನ. ಸಣ್ಣ ಸಣ್ಣ ವಿಚಾರದಲ್ಲಿ ಅಶಾಂತಿ ತೋರಿ ಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸುವುದು. ಪಾಲುದಾರಿಕೆ ವ್ಯವಹಾರಗಳು ಲಾಭ ತರಲಿವೆ.