ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್ಬಾಲ್ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?

– ಹೀಗೊಂದು ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ, ಜನಸಾಮಾನ್ಯರ ನಡುವೆ ಸುಳಿದಾಡುತ್ತಿದೆ.

ಫುಟ್ಬಾಲ್ ಮಾಂತ್ರಿಕ, ಅರ್ಜೆಂಟಿನಾದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದರು. 'G.O.A.T Tour of India' ಭಾಗವಾಗಿ ಡಿಸೆಂಬರ್ 13ರಿಂದ 15ರ ವರೆಗಿನ ಮೂರು ದಿನಗಳ ಪ್ರವಾಸದ ವೇಳೆ ಅವರು, ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಿದ್ದರು.

ಮೊದಲ ದಿನವೇ ಗದ್ದಲವಾಗಿತ್ತು. ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

ಬಿಗಿ ಭದ್ರತೆಯೊಂದಿಗೆ ಕ್ರೀಡಾಂಗಣ ಪ್ರವೇಶಿಸಿದ ಮೆಸ್ಸಿ ಅವರನ್ನು ಗಣ್ಯರು, ಆಯೋಜಕರು, ರಾಜಕಾರಣಿಗಳು, ಖ್ಯಾತನಾಮರು ಹಾಗೂ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು. ಮೈದಾನದಲ್ಲಿ ಸ್ವಲ್ಪ ದೂರ ನಡೆದು ಬಂದು ಅಭಿಮಾನಿಗಳತ್ತ ಕೈಬೀಸಿದ್ದ ಮೆಸ್ಸಿ, ನಿಗದಿಗಿಂತ ಮೊದಲೇ ನಿರ್ಗಮಿಸಿದ್ದರು. ಇದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು.

ರಾತ್ರಿಯಿಡೀ ಕಾದರೂ, ಸಾವಿರಾರು ರೂಪಾಯಿ ಕೊಟ್ಟು ಕ್ರೀಡಾಂಗಣಕ್ಕೆ ಬಂದರೂ ನೆಚ್ಚಿನ ತಾರೆಯನ್ನು ನೋಡಲಾಗಲಿಲ್ಲ ಎಂದು ಆಕ್ರೋಶಗೊಂಡು, ಕುರ್ಚಿ, ಬಾಟಲಿಗಳನ್ನು ಕ್ರೀಡಾಂಗಣದ ಎಸೆದಿದ್ದರು. ದಾಂದಲೆಯೇ ನಡೆದುಹೋಯಿತು. ಕ್ರೀಡಾಂಗಣ ರಣಾಂಗಣವಾಗಿ ಬದಲಾಗಿತ್ತು.

ಈ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಬೇಸರ ವ್ಯಕ್ತಪಡಿಸಿದ್ದರು.

ಘಟನೆಯನ್ನು 'ಅತ್ಯಂತ ದುರದೃಷ್ಟಕರ' ಎಂದಿದ್ದ ಅವರು, 'ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಕೋಲ್ಕತ್ತ ಘಟನೆಯು, ಈ ಆಟವನ್ನು ಆಡುವ 211 ರಾಷ್ಟ್ರಗಳಲ್ಲೂ ದೇಶಕ್ಕೆ ಕೆಟ್ಟಹೆಸರು ತಂದಿದೆ' ಎಂದು ಹೇಳಿದ್ದರು.
.ಭಾರತ ಪ್ರವಾಸದ ಬಳಿಕ ಫುಟ್ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು.ಮೆಸ್ಸಿ ಕಾರ್ಯಕ್ರಮದ ವೈಫಲ್ಯ; ಬಂಗಾಳದ ಮೇಲೆ 50 ವರ್ಷದವರೆಗೂ ಪರಿಣಾಮ: AIFF.
ಇದರ ಬೆನ್ನಲ್ಲೇ, ಜಗತ್ತಿನಲ್ಲಿ ಎಷ್ಟು ರಾಷ್ಟ್ರಗಳಿವೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಫಿಫಾ ಸದಸ್ಯತ್ವ ಪಡೆದಿರುವ ಸಂಘಟನೆ/ದೇಶಗಳ ಪೈಕಿ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದಿರುವ ರಾಷ್ಟ್ರಗಳು (ವ್ಯಾಟಿಕನ್ ಸಿಟಿ, ಪ್ಯಾಲೆಸ್ಟೀನ್ ಸೇರಿದಂತೆ) 195 ಮಾತ್ರ. ಆದರೆ, ಸಾರ್ವಭೌಮತ್ವ ಹೊಂದಿಲ್ಲದ ಹಾಗೂ ಇತರ ರಾಷ್ಟ್ರಗಳ ವಿಶೇಷ ಆಡಳಿತಕ್ಕೆ ಒಳಪಟ್ಟಿರುವ ಕೆಲವು ದೇಶಗಳು, ಸ್ವತಃ ಸ್ವತಂತ್ರ ರಾಷ್ಟ್ರಗಳೆಂದು ಘೋಷಿಸಿಕೊಂಡಿದ್ದರೂ, ಭೂವಿವಾದಗಳನ್ನು ಹೊಂದಿರುವ ದೇಶಗಳು, ಮತ್ತೊಂದು ರಾಷ್ಟ್ರವನ್ನು ಅವಲಂಬಿಸಿರುವ ದ್ವೀಪಗಳಿಗೂ ಫಿಫಾ ಸದಸ್ಯತ್ವ ಸಿಕ್ಕಿದೆ.

ಯುನೈಟೆಡ್ ಕಿಂಗ್ಡಮ್ ಅಡಿ ನಾಲ್ಕು ರಾಷ್ಟ್ರಗಳು
ಯುನೈಟೆಡ್ ಕಿಂಗ್ಡಮ್ (ಯುಕೆ) ಸಾರ್ವಭೌಮತ್ವಕ್ಕೆ ಒಳಪಟ್ಟಿರುವ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್, 1904ರಲ್ಲಿ ಫಿಫಾ ಅಸ್ತಿತ್ವಕ್ಕೆ ಬರುವ ಮೊದಲೇ ತಮ್ಮದೇ ಫುಟ್ಬಾಲ್ ಸಂಘಟನೆಗಳನ್ನು ಹೊಂದಿದ್ದವು. ನಂತರ, ಫಿಫಾ ಸದಸ್ಯತ್ವ ಪಡೆದುಕೊಂಡಿವೆ.

ಅವಲಂಬಿತ ಪ್ರಾಂತ್ಯಗಳು
ತಾಂತ್ರಿಕವಾಗಿ ಮತ್ತೊಂದು ರಾಷ್ಟ್ರದ ಭಾಗವೇ ಆಗಿದ್ದರೂ, ಕ್ರೀಡೆಯಲ್ಲಿ ಸ್ವಾಯತ್ತತೆ ಸಾಧಿಸಿರುವ ಕೆಲವು ಪ್ರಾಂತ್ಯಗಳು, ದ್ವೀಪಗಳು ತಮ್ಮದೇ ಫುಟ್ಬಾಲ್ ಸಂಸ್ಥೆಗಳನ್ನು ಹೊಂದಿವೆ. ಅವುಗಳಿಗೂ ಫಿಫಾ ಪ್ರತ್ಯೇಕ ಸದಸ್ಯತ್ವ ನೀಡಿದೆ.

– ಯುನೈಟೆಡ್ ಸ್ಟೇಟ್ಸ್ನ ಪ್ರಾಂತ್ಯಗಳು

ಪೋರ್ಟೊ ರಿಕೊ

ಗುವಾಮ್

ಅಮೆರಿಕನ್ ಸಮೋವಾ

ದಿ ಯುಎಸ್ ವರ್ಜಿನ್ ಐಸ್ಲ್ಯಾಂಡ್

– ಫ್ರಾನ್ಸ್ ಪ್ರಾಂತ್ಯಗಳು

ನ್ಯೂ ಕ್ಯಾಲೆಡೋನಿಯಾ

ತಹಿಟಿ (ದ್ವೀಪ)

– ನೆದರ್ಲ್ಯಾಂಡ್ಸ್ ಪ್ರಾಂತ್ಯಗಳು

ಅರುಬಾ (ದ್ವೀಪ)

ಕ್ಯುರಾಕೊ (ದ್ವೀಪ)

ಸಿಂಟ್ ಮಾರ್ಟೆನ್ (ದ್ವೀಪ)

– ಚೀನಾ ಆಡಳಿತಕ್ಕೊಳಪಟ್ಟಿರುವ ಪ್ರದೇಶಗಳು

ಹಾಂಗ್ಕಾಂಗ್

ಮಕಾವು

ಸಂಪೂರ್ಣ ಸ್ವಾಯತ್ತತೆ ಹೊಂದಿಲ್ಲದ ದೇಶಗಳು
ಅಂತರರಾಷ್ಟ್ರೀಯ ಸಮುದಾಯವು ಸಾರ್ವಭೌಮ ರಾಷ್ಟ್ರಗಳೆಂದು ಇನ್ನೂ ಗುರುತಿಸಿಲ್ಲದ ಕೆಲವು ಫುಟ್ಬಾಲ್ ಸಂಘಟನೆಗಳೂ ಫಿಫಾ ಮಾನ್ಯತೆ ಹೊಂದಿವೆ.

ಅಂತಹವು...

ಪ್ಯಾಲೆಸ್ಟೀನ್

ಕೊಸೊವೊ

ಚೀನಿಸ್ ತೈಪೆ

ಫಿಫಾ ಸದಸ್ಯತ್ವ ಹೊಂದಿರುವ ಎಲ್ಲ ಸಂಘಟನೆಗಳ ಪಟ್ಟಿ ಇಲ್ಲಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.