‘ಐಪಿಎಲ್ ಆಟಗಾರರನ್ನು ಹರಾಜು ಹಾಕುವಂತೆ ನಮ್ ರಾಜಕಾರಣಿಗಳನ್ನೂ ಹರಾಜು ಹಾಕಿದರೆ ಹೇಗಿರುತ್ತೆ ರೀ…’ ಪೇಪರ್ ಓದುತ್ತಾ ಕೇಳಿದಳು ಹೆಂಡತಿ.

‘ಅವರೇ ಕೋಟಿ ಕುಳಗಳು. ಇನ್ನು, ಅವರನ್ನು ಹರಾಜಿನಲ್ಲಿ ಕೊಂಡೊಕೊಳ್ಳೋ ಶಕ್ತಿ ಯಾರಿಗಮ್ಮ
ಇರುತ್ತೆ?’

‘ಇದು ಉಲ್ಟಾ ಹರಾಜು ಪ್ರಕ್ರಿಯೆ ರೀ... ಹರಾಜು ಹಾಕಿಸ್ಕೊಳೋಕೆ ಬರೋರೇ ದುಡ್ಡು ಕೊಡಬೇಕು.
ಯಾರು ಜಾಸ್ತಿ ದುಡ್ಡು ಕೊಡುತ್ತಾರೋ ಅವರೇ ನಮ್ಮ ನಾಯಕ’ ಎಂದಳು ಮನೆಯ ಅಧಿನಾಯಕಿ.

‘ಆಯ್ತು. ಅವರನ್ನೆಲ್ಲ ಹರಾಜಿನಲ್ಲಿ ಆಯ್ಕೆ ಮಾಡಿಕೊಂಡು ಏನ್ ಮಾಡಬೇಕಮ್ಮ’.

‘ಇದೇನ್ರಿ ಹೀಗೆ ಕೇಳ್ತೀರಿ... ನಮ್ಮನ್ನ ಆಳೋರು ಬೇಡ್ವಾ? ನ್ಯಾಷನಲ್ ಲೆವೆಲ್ನಲ್ಲಿ ಜಾಸ್ತಿ ದುಡ್ಡು ಕೊಟ್ಟೋರು ಪ್ರಧಾನಿ. ಸ್ಟೇಟ್ ಲೆವೆಲ್ನಲ್ಲಿ ಹೆಚ್ಚು ದುಡ್ಡು ಕೊಟ್ಟೋರು ಮುಖ್ಯಮಂತ್ರಿ. ನಂತರ ಅವರವರು ಕೊಟ್ಟ ದುಡ್ಡಿನ ಅನುಸಾರ ಉಪಮುಖ್ಯಮಂತ್ರಿ, ಮಂತ್ರಿ, ಶಾಸಕ, ಹೀಗೆ ಹುದ್ದೆಗಳನ್ನ ಹಂಚುತ್ತಾ ಹೋಗೋದು...’

‘ಅದ್ ಸರಿ. ಕ್ರಿಕೆಟ್ ಆಟಗಾರರನ್ನ ಅವರವರು ಹೊಂದಿರೋ ಟ್ಯಾಲೆಂಟ್ ಅನುಸಾರ ಸೆಲೆಕ್ಟ್ ಮಾಡ್ತಾರೆ. ಇಲ್ಲಿ ರಾಜಕಾರಣಿಗಳ ಆಯ್ಕೆ ಮಾನದಂಡವೇನು? ತುಂಬಾ ಜನ ದೊಡ್ಡ ಮೊತ್ತ ಕೊಡೋಕೆ ತಯಾರಿದ್ದರೆ, ಯಾರನ್ನ ಸೆಲೆಕ್ಟ್ ಮಾಡ್ಕೊಬೇಕು?’ ಎಂದೆ ಗೊಂದಲದಿಂದ.

‘ಸಿಂಪಲ್. ಇದು, ಪೊಲಿಟಿಕಲ್ ಪ್ರೀಮಿಯರ್ ಲೀಗ್. ಅಂದ್ರೆ ಪಿಪಿಎಲ್. ಮೊದಲ ಅರ್ಹತೆ, ಎಷ್ಟು ಸಲ ಜೈಲಿಗೆ ಹೋಗಿ ಬಂದಿದ್ದಾರೆ ಅನ್ನೋದು. ಎರಡನೆಯದ್ದು, ಎಷ್ಟು ಬಾರಿ ಐಟಿ–ಇಡಿ ದಾಳಿಗೆ ಒಳಗಾಗಿದ್ದಾರೆ ಅನ್ನೋದು. ಮೂರನೆಯದು, ಎಷ್ಟು ಪಕ್ಷಗಳನ್ನ ಬದಲಾಯಿಸಿದ್ದಾರೆ ಅನ್ನೋದರ ಜೊತೆಗೆ, ಹೆಚ್ಚು ಕ್ರಿಮಿನಲ್ ಕೇಸ್ ಯಾರ ಮೇಲಿದೆ ಅನ್ನೋದನ್ನ ನೋಡಿ, ಈ ಎಲ್ಲ ವಿಭಾಗದಲ್ಲಿ ಯಾರ ಸ್ಕೋರ್ ಹೆಚ್ಚಿರುತ್ತೋ ಅವರೇ ಎಲಿಜಬಲ್’.

‘ಇಷ್ಟು ದುಡ್ಡು ಕೊಟ್ಟು ಆಯ್ಕೆಯಾದವರಿಗೇನು ಲಾಭ?’

‘ಮುಂದೆ ದೇಶವನ್ನೇ ಮಾರ್ತಾರಲ್ರೀ, ಇನ್ನೇನ್ ಲಾಭ ಬೇಕು ಅವರಿಗೆ’ ಎನ್ನುತ್ತಾ ಗಂಭೀರವಾಗಿ ಪೇಪರ್ ಓದತೊಡಗಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.