ಜನವರಿ 17ರ ‘ಮುಕ್ತಛಂದ’ ಪುರವಣಿಯಲ್ಲಿ ಪ್ರಕಟವಾದ ರಘುನಂದನರ ಕವಿತೆ ‘ಒಡಬಾಳ ಭಡವನ ಒಳತೋಟಿ’ ಬಗೆಗೆ ನನ್ನ ಮೆಚ್ಚುಗೆ ಸೂಚಿಸಲು ಈ ಪತ್ರ .

ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕವಿತೆಗಳು ಸದಾ ಸದಭಿರುಚಿಯ ಆಯ್ಕೆಗಳಾಗಿರುತ್ತವೆ. ರಘುನಂದನರ ಕವಿತೆ ಸಮಕಾಲೀನ ಬದುಕು ಮತ್ತು ನಮ್ಮ ಭಾಷಿಕ ಪರಂಪರೆಗಳನ್ನು ಒಟ್ಟಾಗಿ ಧೇನಿಸುತ್ತದೆ. ಕವಿ ತನ್ನ ಪೂರ್ವಸೂರಿಗಳಿಗೆ ಗೌರವ ಸಲ್ಲಿಸಿಯೂ ಅವರೊಡನೆ ತನಗಿರುವ ಭಿನ್ನಮತವನ್ನು ಸೂಚಿಸುತ್ತಾರೆ. ರಘುನಂದನರ ಕವಿತೆಯಲ್ಲಿ ಬಸವ, ಅಲ್ಲಮ, ಮಧುರಚೆನ್ನ, ಬೇಂದ್ರೆ– ಹೀಗೆ ಇವರು ಹಲವು ಕವಿಗಳು ನಮಗೆ ಎದುರಾಗುತ್ತಾರೆ.

ಆದರೆ ರಘುನಂದನ ಆ ಕವಿಗಳ ಮಾತನ್ನು ಮುರಿದು ಮತ್ತೆ ಕಟ್ಟುತ್ತಾರೆ. ಉದಾ: ಬಸವನ ಒಂದು ಸುಪ್ರಸಿದ್ಧ ವಚನದ ‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಸಾಲಿಗೆ ಇವರು ಕೊಡುವ ತಿರುವು ನೋಡಿ. ಬಸವನಿಗೆ ಮನೆಯೊಡೆಯ– ದೇವರು– ಇದ್ದಾನೋ ಇಲ್ಲವೋ ಎಂಬ ಸಂದೇಹ, ಆತಂಕ. ಅದು ಇದ್ದಾನೆ /ಇಲ್ಲ ಎಂಬ ಬಗೆಯ ಖಚಿತ ಉತ್ತರ ಬಯಸುವ ಪ್ರಶ್ನೆಯಲ್ಲ. ದೇವರನ್ನು ನಂಬುವವನಿಗೆ ಆ ಸಂದೇಹವೇ ಇಲ್ಲ.

ಬಸವನ ಈ ಆರ್ತತೆ ಕವಿಯದ್ದೂ ಆಗಿದೆ. ಆದರೆ ಇಲ್ಲದ ಮನೆಯೊಡೆಯನನ್ನು ‘ಆಗಿಸಿಕೊಳ್ಳಲು’ ಇವರು ಯತ್ನಿಸುತ್ತಾರೆ. ಆರ್ತತೆಯನ್ನು ಸಹ ಬೆಡಗಿನ ಮಾತಾಗಿಸುವುದು ಕನ್ನಡದ ಪರಂಪರೆ. ಇಂತಹ ಹಲವು ಉದಾಹರಣೆಗಳನ್ನು ರಘುನಂದನರ ಕವಿತೆಯಲ್ಲಿ ಹೆಕ್ಕಿ ಕೊಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.