1) ಧರೆಯ ‘ಅತ್ಯಂತ ಶುಷ್ಕ ಮರುಭೂಮಿ’ ಎಂಬ ದಾಖಲೆಯ ಪ್ರಸಿದ್ಧ ಮರುಭೂಮಿಯ ಒಂದು ದೃಶ್ಯ (ಚಿತ್ರ – 1) ರಲ್ಲಿದೆ. ಹಾಗೆ ಗರಿಷ್ಠ ಜಲಾಭಾವಕ್ಕೆ ಹೆಸರಾದ ಈ ಬಿಸಿ ಮರುಭೂಮಿ ಯಾವುದು?
ಅ) ಸಹರಾ ಮರುಭೂಮಿ
ಬ) ಕಲಹಾರೀ ಮರುಭೂಮಿ
ಕ) ಗೋಬಿ ಮರುಭೂಮಿ
ಡ) ಅಟಕಾಮ ಮರುಭೂಮಿ

2) (ಚಿತ್ರ – 2) ಅಲ್ಲಿರುವ ವಿಶಿಷ್ಟ ವಾಹನವನ್ನು ಗುರುತಿಸಿ ಈ ವಾಹನ ಯಾವುದು ಗೊತ್ತೇ?
ಅ) ಹಾವರ್ ಕ್ರಾಫ್ಟ್
ಬ) ಜಲಾಂತರ್ಗಾಮಿ
ಕ) ತೈಲ ಟ್ಯಾಂಕರ್
ಡ) ವಿಮಾನ ವಾಹಕ

3) ಹರಳಿನ ರೂಪದ ಸುಂದರ ಖನಿಜವೊಂದು (ಚಿತ್ರ – 3 ರಲ್ಲಿದೆ). ಖನಿಜಗಳ ಬಗೆಗೆ ಎರಡು ಪ್ರಶ್ನೆಗಳು:
ಅ) ಖನಿಜಗಳ ಗಡಸುತನ ಸೂಚಿಸುವ ಅಳತೆ ಪಟ್ಟಯ ಹೆಸರೆನು?
ಬ) ಧರೆಯಲ್ಲಿ ಎಷ್ಟು ವಿಧ ಖನಿಜಗಳನ್ನು ಗುರುತಿಸಲಾಗಿದೆ?

4) ಪ್ರಾಚೀನ ಮಾನವರಿಂದ ಗುಹೆಗಳ ಪಳಗೋಡೆಗಳ ಮೇಲೆ ಬರೆಯಲ್ಪಟ್ಟ ಚಿತ್ರಗಳ ಒಂದು ದೃಶ್ಯ (ಚಿತ್ರ – 4 ರಲ್ಲಿದೆ). ಮಾನವ ರಚಿತ ಚಿತ್ರಕಲೆಯ ಅತ್ಯಂತ ಪ್ರಾಚೀನ ಕಾಲ ಇವುಗಳಲ್ಲಿ ಯಾವುದು?
ಅ) 1 ಲಕ್ಷ ವರ್ಷ ಹಿಂದೆ
ಬ) 65 ಸಾವಿರ ವರ್ಷ ಹಿಂದೆ
ಕ) 30 ಸಾವಿರ ವರ್ಷ ಹಿಂದೆ
ಡ) 10 ಸಾವಿರ ವರ್ಷ ಹಿಂದೆ

5) ಪೃಥ್ವಿಯ ಆಂತರಾಳದಿಂದ ಹೊರಕ್ಕೆ ಉಕ್ಕಿ ಸುರಿಯುತ್ತಿರುವ ಶಿಲಾಪಾಕದ ದೃಶ್ಯ (ಚಿತ್ರ – 5) ರಲ್ಲಿದೆ.
ಅ) ಭೂ ಆಂತರ್ಯದಲ್ಲಿ ಶಿಲಾಪಾಕ ತುಂಬಿರುವ ಪದರ ಯಾವುದು?
ಬ) ಭೂಮಿಯೊಳಗಿನ ಶಿಲಾಪಾಕದ ವಿಶೇಷ ಹೆಸರೇನು?

6) ಅತ್ಯಧಿಕ ಪ್ರಮಾಣದಲ್ಲಿ ಲವಣಗಳು ಬೆರೆತಿರುವ ಹಾಗಾಗಿ ಗರಿಷ್ಠ ಸಾಂದ್ರತೆಯ ಲವಣ ಜಲದ ‘ಒಳನಾಡ ಸಮುದ್ರ’ದ ಒಂದು ದೃಶ್ಯ (ಚಿತ್ರ – 6) ರಲ್ಲಿದೆ. ಈ ಜಲಾವಾರದ ಹೆಸರು ಗೊತ್ತೇ?
ಅ) ಕೆಂಪು ಸಮುದ್ರ
ಬ) ಮೃತ ಸಮುದ್ರ
ಕ) ಕಪ್ಪು ಸಮುದ್ರ
ಡ) ಕ್ಯಾಸ್ಪಿಯನ್ ಸಮುದ್ರ

7) ಹಳೆಯ ಪುಸ್ತಕ, ಹಾಸಿಗೆ, ದಿಂಬು ಇತ್ಯಾದಿಗಳಲ್ಲೆಲ್ಲ ವಸತಿ ಹೂಡಿ, ಕೆಲವರಿಗೆ ತೀವ್ರ ಸ್ವರೂಪದ ಅಲರ್ಜಿಕಾರಕವೂ ಆದ ಸೂಕ್ಷ್ಮ ಶರೀರದ ‘ಜೀವಿ’ ಯೊಂದರ ವಿಸ್ತೃತ ರೂಪ
(ಚಿತ್ರ – 7) ರಲ್ಲಿದೆ. ಈ ಜೀವಿ ಯಾವುದು? ಗುರುತಿಸಿ:
ಅ) ನುಸಿ ಹುಳು
ಬ) ಧೂಳು ಹುಳು
ಕ) ತಿಗಣೆ
ಡ) ಹೇನು

8) ಚಕ್ಕೆ ಚರ್ಮದ ಗಟ್ಟಿ ಕವಚ ತೊಟ್ಟಿರುವ ಪ್ರಸಿದ್ಧ ಪ್ರಾಣಿಯೊಂದು (ಚಿತ್ರ – 8) ರಲ್ಲಿದೆ. ಈ ಪ್ರಾಣಿಯನ್ನು ಕೆಳಗಿನ ಪಟ್ಟಿಯಲ್ಲಿ ಪತ್ತೆ ಹಚ್ಚಿ:
ಅ) ಹೆಗ್ಗಣ
ಬ) ಪ್ಯಾಂಗೋಲಿನ್
ಕ) ಮುಳ್ಳು ಹಂದಿ
ಡ) ಆರ್ಮಡಿಲ್ಲೋ

9) ಜಗದಾದ್ಯಂತ ಜನಪ್ರಿಯವಾಗಿರುವ ಗೊಂಬೆ ‘ಟೆಡ್ಡಿ ಬೇರ್’ನ ವಾಸ್ತವದ ಜೀವಂತ ರೂಪದ ಚಿತ್ರ ಇಲ್ಲಿದೆ (ಚಿತ್ರ – 9)
ಅ) ಈ ಪ್ರಾಣಿಯ ಹೆಸರೇನು?
ಬ) ಇದರ ನೈಸರ್ಗಿಕ ವಾಸಕ್ಷೇತ್ರ ಯಾವ ಭೂಖಂಡ?
ಕ) ಈ ಪ್ರಾಣಿಯ ನಿರ್ದಿಷ್ಟ, ವಿಶಿಷ್ಟ ಆಹಾರ ಏನು?

10) ಶ್ವೇತ ವರ್ಣದ ಲೋಹಗಳಲ್ಲೊಂದಾದ ‘ಪ್ಲಾಟಿನಂ’ ಗಟ್ಟಿಯೊಂದು ಚಿತ್ರದಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಬಿಳಿ ಬಣ್ಣದ ಲೋಹ ಅಲ್ಲ?
ಅ) ಬೆಳ್ಳಿ ಬ) ತವರ
ಕ) ಪಾದರಸ ಡ) ತಾಮ್ರ
ಇ) ಅಲ್ಯೂಮಿನಿಯಂ

11) ನಮ್ಮ ಸೌರವ್ಯೂಹದ ಗ್ರಹಗಳಲ್ಲೊಂದಾದ ‘ಬುಧ’ (ಚಿತ್ರ – 11) ರಲ್ಲಿದೆ. ಬುಧ ಗ್ರಹವನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಅಲ್ಲ?
ಅ) ಅದು ಸೌರವ್ಯೂಹದ ಅತ್ಯಂತ ಚಿಕ್ಕ ಗಾತ್ರದ ಗ್ರಹ
ಬ) ಅದು ಸೂರ್ಯನಿಗೆ ಅತ್ಯಂತ ಸನಿಹದ ಗ್ರಹ
ಕ) ಅದು ಅತ್ಯಂತ ಬಿಸಿಯ ಗ್ರಹ
ಡ) ಅದು ಚಂದ್ರರಹಿತ ಗ್ರಹ

12) ಮಾನವನ ಪದಾರ್ಪಣವಾಗಿರುವ ಭೂಮ್ಯೇತರ ಕಾಯ (ಚಿತ್ರ – 12) ರಲ್ಲಿದೆ. ಈ ಕಾಯ ಯಾವುದು?
ಅ) ಮಂಗಳ ಗ್ರಹ
ಬ) ನಮ್ಮ ಚಂದ್ರ
ಕ) ಗುರುವಿನ ಚಂದ್ರ ಯೂರೋಪಾ
ಡ) ಶನಿಯ ಟೈಟಾನ್

ಉತ್ತರಗಳು

1) ಡ – ಅಟಕಾಮ ಮರುಭೂಮಿ
2) ಬ – ಜಲಾಂತರ್ಗಾಮಿ
3) ಅ – ಮೋಹ್ಸ್ನ ಪಟ್ಟಿ; ಬ – ಸುಮಾರು 3500
4) ಅ – ಒಂದು ಲಕ್ಷ ವರ್ಷ ಹಿಂದೆ
5) ಅ – ಕವಚ; ಬ – ಮ್ಯಾಗ್ಮಾ
6) ಬ – ಮೃತ ಸಮುದ್ರ
7) ಬ – ಧೂಳು ಹುಳು
8) ಡ – ಆರ್ಮ ಡಿಲ್ಲೋ
9) ಅ – ಕೂವಾಲೇ; ಬ – ಆಸ್ಟ್ರೇಲಿಯಾ;
ಕ – ನೀಲಗಿರಿ ಎಲೆ
10) ಡ – ತಾಮ್ರ
11) ಕ – ತಪ್ಪು ಹೇಳಿಕೆ (ಅತ್ಯಂತ ಬಿಸಿ ಗ್ರಹ ಶುಕ್ರ)
12) ಬ – ನಮ್ಮ ಚಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.