ಭಾನುವಾರ, ಜನವರಿ 26, 2020
20 °C

ಈಜಲು ಹೋದ ನಗರದ ಬಾಲಕ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಚಾರಾ ಕಾರಾಡಿ ಬಳಿ ಸ್ನೇಹಿತರೊಂದಿಗೆ ಶನಿವಾರ ಸೀತಾನದಿಯಲ್ಲಿ ಈಜಲು ಹೋದ ಬೆಂಗಳೂರಿನ ವಿದ್ಯಾರ್ಥಿ ಶೋಭಿತ್ (13) ನೀರುಪಾಲಾಗಿದ್ದಾನೆ.ಅಜ್ಜನ ಮನೆ, ಚಾರಾ ಗ್ರಾಮದ ಕಾರಾಡಿಯಲ್ಲಿ ನಡೆದ ಯಕ್ಷಗಾನ ಬಯಲಾಟಕ್ಕೆ ಶೋಭಿತ್ ಪೋಷಕರ ಜತೆ ಆಗಮಿಸಿದ್ದ.

ಬೆಂಗಳೂರು ವಿಜಯನಗರದ ಬಂಟ್ಸ್ ಸಂಘದ ಆರ್‌ಎನ್‌ಎಸ್ ವಿದ್ಯಾನಿಕೇತನ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಯಾದ ಶೋಭಿತ್ ಕ್ರೀಡಾಪಟುವಾಗಿದ್ದ. ಶನಿವಾರ ಮಧ್ಯಾಹ್ನ ಮೂವರು ಸ್ನೇಹಿತರು, ಸಹೋದರ ಶಮಂತ್ ಜತೆ ಈಜಲು ಹೋಗಿದ್ದ. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)