ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸಂಗತಿಗಳನ್ನು ಅರ್ಥೈಸಲು ಕಥೆ ಹೇಳುವುದು ಪರಿಣಾಮಕಾರಿ ಮಾಧ್ಯಮ ಎಂಬ ಅಂಶವನ್ನು 1998ರಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ನಗರದ ‘ಕಥಾಲಯ’ ಸಂಸ್ಥೆ ಇದೀಗ ಕಥೆ ಹೇಳುವ ಮ್ಯಾರಥಾನ್ ಎಂಬ ವಿಶಿಷ್ಟ ಕಾರ್ಯಾಗಾರವನ್ನು ಮಾ.22ರಂದು ಹಮ್ಮಿಕೊಂಡಿದೆ.

ವಿಶ್ವ ಕಥೆ ಹೇಳುವ ದಿನವೂ ಆಗಿರುವ ಮಾ.22ನ್ನು ಈ ಉಚಿತ ಕಾರ್ಯಾಗಾರದ ಮೂಲಕ ಆಚರಿಸುವುದೂ ಕಥಾಲಯದ ಉದ್ದೇಶವಾಗಿದೆ. ಅಂದು ಮೂರು ಹಂತದಲ್ಲಿ ಕಾರ್ಯಕ್ರಮ ನಡೆಯಲಿದ್ದು, 15 ಮಂದಿ ತಜ್ಞ ಕಥಾಕಾರರು ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರೂ 10ರಿಂದ 15 ನಿಮಿಷದ ಕುತೂಹಲಕಾರಿ ಕಥೆಗಳನ್ನು ಹೇಳುತ್ತಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಆದರೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಸ್ಥಳ: ಕಥಾಲಯ, ನಂ. 88, ಬಿಎಚ್ಬಿಸಿಎಸ್ ಬಡಾವಣೆ, 3ನೇ ಮುಖ್ಯರಸ್ತೆ, ಬನ್ನೇರುಘಟ್ಟ ರಸ್ತೆ, ಬಿಟಿಎಂ 2ನೇ ಹಂತ. ಸಂಜೆ 4ರಿಂದ 7ರವರೆಗೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ kathalaya@gmail.com 82773 89840.

ರಂಗೋಲಿ ಮೆಟ್ರೊ ಕಲಾ ಕೇಂದ್ರ ಹಾಗೂ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ: ರಂಗಸ್ಥಳ ಸಭಾಂಗಣ, ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ. ರಸ್ತೆ. ‘ಟೆಲ್ ಎ ಥಾನ್’ ಕಾರ್ಯಕ್ರಮದಡಿ ಹತ್ತು ಮಂದಿ ಮಾನ್ಸ್ಟರ್ ಹಾಗೂ ಡ್ರ್ಯಾಗನ್ ಕುರಿತ ಕಥೆಗಳನ್ನು ಹೇಳಲಿದ್ದಾರೆ. ಸಂಜೆ 4.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.