ಶನಿವಾರ, ಮೇ 8, 2021
25 °C

ಕವನದ ಹುಟ್ಟು ಸಹಜ; ಪ್ರಜ್ಞಾಪೂರ್ವಕವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಕವನದ ಹುಟ್ಟು ಸಹಜವಾಗಿರಬೇಕೇ ಹೊರತು ಅದು ಪ್ರಜ್ಞಾಪೂರ್ವಕವಾಗಿರಬಾರದು. ಕವಿ ಉಳಿಯುವುದು ಎಲ್ಲಾ ಕಾಲಕ್ಕೂ ಸಲ್ಲುವ ಸಲ್ಲುವ ಕವನಗಳನ್ನು ರಚಿಸಿದಾಗ ಮಾತ್ರ~ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.ಅವರು ಈಚೆಗೆ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆದ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣೆ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಲಜಾಕ್ಷಿ ಅವರ ಸಣ್ಣಕತೆಗಳ ಕುರಿತಾಗಿ ಎನ್.ಕೆ.ರಾಜಲಕ್ಷ್ಮಿ ಮಾತನಾಡಿದರು. ಸಂಘ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ವಿ.ಜಿ.ಭಟ್, ಸಾಹಿತಿ ಚಂದ್ರಕಲಾ ನಂದಾವರ, ಸಂಘ  ಕಾರ್ಯದರ್ಶಿ ಯು.ಶೈಲಾ ಮಾತನಾಡಿದರು.ಕವನ ಸ್ಪರ್ಧೆಯಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ವಿನಯಾ ಭಟ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಎಂ.ಪವನ್ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಸುಭಾಷ್ ಪಟ್ಟಾಜೆ ಮೊದಲ ಮೂರು ಬಹುಮಾನ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.