ಬುಧವಾರ, ಜೂನ್ 16, 2021
23 °C

ಕಾಡಾನೆ ದಾಳಿ: ರೈತನಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಕಾಡಾನೆ ದಾಳಿಯಿಂದ ಕೃಷ್ಣ (38) ಎಂಬ ರೈತ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ನಡೆದಿದೆ.ಕೃಷ್ಣ ಅವರು ತೋಟದಲ್ಲಿ ಸೊಪ್ಪು ಬಿಡಿಸುತ್ತಿದ್ದಾಗ ಒಂಟಿ ಆನೆಯೊಂದು ಸದ್ದು ಮಾಡದೆ ಬಂದು ದಾಳಿ ಮಾಡಿದೆ. ಅವರ ಸೊಂಟ, ಕೈ ಮತ್ತು ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.ಬುಧವಾರ ರಾತ್ರಿ ಗ್ರಾಮದ ವಿವಿಧ ತೋಟಗಳಿಗೆ ದಾಳಿ ನಡೆಸಿರುವ ಈ ಪುಂಡಾನೆ ಗೋಪಾಲೇ ಗೌಡ ಎಂಬುವವರ ಪಂಪ್‌ಸೆಟ್, ಮುನಿಸಿದ್ದೇಗೌಡ ಎಂಬುವವರ ಹಲಸು, ಬಾಳೆ ತೋಟವನ್ನು ನಾಶ ಮಾಡಿದೆ.ಆಗ್ರಹ: ಈ ಭಾಗದಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆಯವರು ಶೀಘ್ರವೇ ಸೋಲಾರ್ ತಂತಿ ಬೇಲಿ ಅಳವಡಿಸಲು ಕಾರ್ಯೋನ್ಮುಖರಾಗಬೇಕು ಎಂದು ಮುಕ್ತ ಟ್ರಸ್ಟ್ ಅಧ್ಯಕ್ಷ ವಿಜಯಾಕುಮಾರ್ ಆಗ್ರಹಿಸಿದ್ದಾರೆ.ಸೋಲಾರ್ ತಂತಿ ಬೇಲಿ ನಿರ್ಮಿಸುವುದಕ್ಕೆ ಇಲಾಖೆಯು ಈಗಾಗಲೇ ಟೆಂಡರ್ ಕರೆದಿದೆ.  ಈ ತಿಂಗಳ 15ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಆದರೆ ಇನ್ನೂ ಆರಂಭವಾಗಿಲ್ಲ ಎಂದು ಅವರು ದೂರಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.