ಬುಧವಾರ, ಮೇ 12, 2021
18 °C

ಕುವೆಂಪು ವಿವಿ: 28ರಿಂದ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗ, ಶಂಕರಘಟ್ಟದ ಪ್ರೊ.ಎಸ್.ಆರ್. ಹಿರೇಮಠ ಸಭಾಂಗಣದಲ್ಲಿ ಏ. 28 ಮತ್ತು 29ರಂದು `ಸಾಂಸ್ಕೃತಿಕ ಅಧ್ಯಯನಗಳ ಪುನಾರಾವಲೋಕನ~ ವಿಷಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ.28ರಂದು ಬೆಳಿಗ್ಗೆ 10ಕ್ಕೆ ಕುಲಪತಿ ಪ್ರೊ.ಎಸ್.ಎ. ಬಾರಿ ವಿಚಾರಸಂಕಿರಣ ಉದ್ಘಾಟಿಸುವರು. ಹೈದರಾಬಾದ್‌ನ ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರೊ.ಸೂಸಿ ತಾರು ಪ್ರಧಾನ ಭಾಷಣ ಮಾಡುವರು. ನಂತರ ಎರಡು ದಿನಗಳ ಕಾಲ ನಡೆಯುವ ಗೋಷ್ಠಿಗಳಲ್ಲಿ ದೇಶದ ಪ್ರಸಿದ್ಧ ವಿದ್ವಾಂಸರು ವಿಷಯದ ವಿವಿಧ ಆಯಾಮಗಳ ಕುರಿತು ಪ್ರಬಂಧಗಳನ್ನು ಮಂಡಿಸುವರು ಎಂದು ವಿಭಾಗದ ಪ್ರೊ.ರಾಜೇಂದ್ರ ಚೆನ್ನಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಸಾಂಸ್ಕೃತಿಕ ಅಧ್ಯಯನ ಇಂದು ಬಹುಮುಖ್ಯ ವಿಷಯವಾಗಿದ್ದು, ಇದರ ಪ್ರಭಾವ, ಪರಿಣಾಮಗಳ ಕುರಿತು ಎಲ್ಲಡೆ ಸಂಶೋಧನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯ ನಡೆದು ಬಂದ ದಾರಿಯನ್ನು ಪುನರಾವಲೋಕನ ಮಾಡಿ, ಭವಿಷ್ಯದಲ್ಲಿ ಅದರ ದಿಕ್ಕು ದೆಸೆಯ ಬಗ್ಗೆ ಚರ್ಚೆ ಮಾಡುವುದು ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದರು.ವಿಚಾರ ಸಂಕಿರಣಕ್ಕೆ ಆಸಕ್ತರಿಗೆ ಮುಕ್ತ ಸ್ವಾಗತವಿದೆ. ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸುವ ಯೋಜನೆಯೂ ಇದೆ ಎಂದು ಪ್ರಶ್ನೆಯೊಂದಕ್ಕೆ ಚೆನ್ನಿ ಪ್ರತಿಕ್ರಿಯಿಸಿದರು.ವಿನೂತನ ಪಠ್ಯಕ್ರಮದ ಮೂಲಕ ಹೆಸರಾಗಿರುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗ ಭಾಷೆಯ ಪ್ರಯೋಗಾಲಯ ಹೊಂದಿರುವುದು ವಿಶೇಷವಾಗಿದೆ. ಅಲ್ಲದೇ,  ಸಂವಹನಕ್ಕೆ ಬೇಕಾದ ಇಂಗ್ಲಿಷ್ ಭಾಷೆಯನ್ನು ಬೋಧಿಸಲಾಗುತ್ತದೆ.ಮುಂದಿನ ದಿನಗಳಲ್ಲಿ ಈ ವಿಷಯದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸಲು ಯುಜಿಸಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ವಿವರಿಸಿದರು.ವಿಭಾಗದ ಮುಖ್ಯಸ್ಥ ಡಾ.ಬಿ.ಎಚ್. ನಾಗ್ಯನಾಯ್ಕ, ಪ್ರಾಧ್ಯಾಪಕ ಎಂ. ದತ್ತಾತ್ರೇಯ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.