ಗುರುವಾರ , ಮೇ 13, 2021
24 °C

ಕೈಗಾರಿಕೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೈಗಾರಿಕಾ ವೃದ್ಧಿಯು ಜುಲೈ ತಿಂಗಳಲ್ಲಿ ಶೇ 3.3ರಷ್ಟಾಗಿದ್ದು, ಭಾರಿ ಯಂತ್ರೋಪಕರಣ, ತಯಾರಿಕಾ ಸರಕು ಮತ್ತು ಗಣಿಗಾರಿಕೆಯಲ್ಲಿನ ಉತ್ಪಾದನಾ ಚಟುವಟಿಕೆ ಕುಂಠಿತಗೊಂಡಿರುವುದರಿಂದ ಕಳಪೆ ಸಾಧನೆ ಕಂಡು ಬಂದಿದೆ.ದೇಶದ ಒಟ್ಟಾರೆ ಅರ್ಥವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಯಲ್ಲಿ ನಡೆಯುತ್ತಿರುವುದು ಕೈಗಾರಿಕಾ ಉತ್ಪಾದನೆ ಕುಸಿತದಲ್ಲಿ ಪ್ರತಿಫಲನಗೊಂಡಿದೆ.`ಇದೊಂದು ಖಂಡಿತವಾಗಿಯೂ ನಿರಾಶಾದಾಯಕ ಚಿತ್ರಣವಾಗಿದ್ದು, ಕೈಗಾರಿಕಾ ಉತ್ಪಾದನೆಯು ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಬೇಕಾಗಿತ್ತು~ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.ಸದ್ಯಕ್ಕಂತೂ  ಕೈಗಾರಿಕಾ ಉತ್ಪಾದನೆಯು ಉತ್ತೇಜನಕಾರಿಯಾಗಿಲ್ಲ. ಒಂದು ವೇಳೆ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಿದರೆ ಒಟ್ಟಾರೆ ಆರ್ಥಿಕ ವೃದ್ಧಿ ದರ ಹೆಚ್ಚಿಗೆ ಇರಲಿದೆ. ಈಗಲೂ ಸೇವಾ ವಲಯ ಮತ್ತು ರಫ್ತು ವೃದ್ಧಿ ಚೆನ್ನಾಗಿಯೇ ಇದೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ  ಕೈಗಾರಿಕಾ ಉತ್ಪಾದನಾ ಚಿತ್ರಣವು ಉತ್ತಮವಾಗಿರಲಿದೆ  ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ಕೈಗಾರಿಕಾ ಉತ್ಪಾದನೆಯು ಶೇ 7.1ರಷ್ಟು ಇರಲಿದೆ ಎಂದು ಸಲಹ ಆ ಸಮಿತಿಯು ಇದಕ್ಕೂ ಮೊದಲು ಅಂದಾಜಿಸಿತ್ತು.ಕಾರ್ಖಾನೆಗಳ ಉತ್ಪಾದನೆಯನ್ನು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ರೂಪದಲ್ಲಿ ಅಳೆಯಲಾಗುತ್ತಿದ್ದು, ಇದು ಕಳೆದ ವರ್ಷದ ಜುಲೈ ತಿಂಗಳಲ್ಲಿ ಶೇ 9.9ರಷ್ಟಿತ್ತು. ಇದೇ ವರ್ಷದ ಜೂನ್ ತಿಂಗಳಲ್ಲಿ ಶೇ 8.8ರಷ್ಟು ದಾಖಲಾಗಿತ್ತು.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ - ಜುಲೈ ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಶೇ 5.8ರಷ್ಟಿತ್ತು. ಇದು ಕೂಡ ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 9.7ರಷ್ಟು ದಾಖಲಾಗಿತ್ತು.`ಐಐಪಿ~ಯಲ್ಲಿ ಶೇ 75ರಷ್ಟು ಪಾಲು ಹೊಂದಿರುವ ತಯಾರಿಕಾ ರಂಗದ ಉತ್ಪಾದನೆಯು  ಜುಲೈ ತಿಂಗಳಲ್ಲಿ ಕೇವಲ ಶೇ 2.3ರಷ್ಟು ಮಾತ್ರ ಹೆಚ್ಚಳ ಸಾಧಿಸಿದೆ. ಕಳೆದ ವರ್ಷ ಇದು ಶೇ 10.8ರಷ್ಟಿತ್ತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.