ಭಾನುವಾರ, ಜೂನ್ 13, 2021
25 °C

ಕ್ಷೀರಸಾಗರ ಗೀತಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀ ಚಾಮುಂಡೇಶ್ವರಿ ಸ್ಟುಡಿಯೊ ಹೊಸರೂಪ ಪಡೆದುಕೊಂಡು ನಳನಳಿಸುತ್ತಿತ್ತು. ಅಂದು ಅಲ್ಲಿ ಎರಡು ಹಬ್ಬಗಳ ಸಂಭ್ರಮ. ಹಳೆಯ ಸ್ವರೂಪ ಕಳೆದುಕೊಂಡು ಮದುಮಗಳಂತೆ ಸಿಂಗಾರಗೊಂಡಿದ್ದ ಸ್ಟುಡಿಯೊದ 140 ಆಸನ ವ್ಯವಸ್ಥೆಯುಳ್ಳ ಪ್ರಿವ್ಯೂ ಥಿಯೇಟರ್‌ ಉದ್ಘಾಟನೆಯ ಸಂಭ್ರಮ ಒಂದೆಡೆ. ಅದಕ್ಕೆ ಜೊತೆಯಾಗಿ, ‘ದೂಧ್ ಸಾಗರ್‌’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. ಈ ಎರಡೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸಚಿವ ರೋಷನ್ ಬೇಗ್‌.ತಾವು ಬಿಳಿಬಟ್ಟೆ ಧರಿಸಿದ ರಾಜಕಾರಣಿ ಮಾತ್ರವಲ್ಲ, ಕನ್ನಡ ಚಿತ್ರರಂಗದ ಏಳಿಗೆ ಬಯಸುವ ಸಿನಿಮಾ ಪ್ರೇಮಿ ಎಂದು ರೋಷನ್‌ ಬೇಗ್‌ ಹೇಳಿಕೊಂಡರು. ಚಿತ್ರರಂಗದ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಸಹಕಾರಗಳನ್ನೂ ನೀಡುವುದಾಗಿ ಹೇಳಿದ ಅವರು, ಅಂತರರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ನಿರ್ಮಾಣದ ಕನಸನ್ನು ಹಂಚಿಕೊಂಡರು. ಇದೇ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದಲ್ಲಿ ಕಲ್ಪನಾ ಮತ್ತು ರಾಜ್‌ಕುಮಾರ್‌ ಅವರನ್ನು ನೋಡಿದ ಗಳಿಗೆಯನ್ನು ಅವರು ನೆನಪಿಸಿಕೊಂಡರು.ವೇದಿಕೆಯಲ್ಲಿದ್ದ ಗಣ್ಯರ ಸಂಖ್ಯೆಯೂ ದೊಡ್ಡದಾಗಿತ್ತು. ‘ದೂಧ್‌ಸಾಗರ್’ ನಿರ್ದೇಶಕ ಸಾಮ್ಯುಯೆಲ್‌ ಟೋನಿ, ಸಂಗೀತ ನಿರ್ದೇಶಕ ಗೌತಮ್‌ ಶ್ರೀವತ್ಸ, ನಟ ತಬಲಾ ನಾಣಿ, ನಟಿ ದೀಪಿಕಾ ದಾಸ್‌, ಶ್ರೀ ಚಾಮುಂಡೇಶ್ವರಿ ಸ್ಟುಡಿಯೊದ ಸಡಗೋಪನ್‌, ರಾಜಲಕ್ಷ್ಮಿ, ನಿರ್ಮಾಪಕರಾದ ಬಸಂತ್‌ ಕುಮಾರ್‌ ಪಾಟೀಲ್‌, ವಿಜಯಕುಮಾರ್‌, ಸಾ.ರಾ. ಗೋವಿಂದು, ನಿರ್ದೇಶಕ ಎಂ.ಎಸ್‌. ರಮೇಶ್‌, ಭಗವಾನ್ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.