ಬುಧವಾರ, ಮಾರ್ಚ್ 29, 2023
23 °C

ಜನಪದ ಒಂದು ವಿಜ್ಞಾನ: ಪಿಚ್ಚಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಜನಪದ ಒಂದು ಜ್ಞಾನ. ಆ ಜ್ಞಾನವೇ ವಿಜ್ಞಾನ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಹೇಳಿದರು.ನಗರದ ಎಂಎಸ್‌ಕೆ ಮಿಲ್ ಹಿಂಭಾಗದ ಎ.ಕೆ.ಆರ್. ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ಭೋದಿವೃಕ್ಷ ಸಾಂಸ್ಕೃತಿಕ ಸೇವಾ ಸಂಘವು ಶುಕ್ರವಾರ ಏರ್ಪಡಿಸಿದ್ದ ‘ಜಾನಪದ ವೈಭೋಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜ್ಞಾನವು ಅಜ್ಞಾನ ಹೋಗಲಾಡಿಸಿದರೆ, ವಿಜ್ಞಾನ ಮೂಢನಂಬಿಕೆ ಹೋಗಲಾಡಿಸುತ್ತದೆ’ ಎಂದರು.‘ಕಲಬುರ್ಗಿ ಬಸವಾದಿ ಶರಣರ ನಾಡು. ಸಮಾನತೆ ಪ್ರತಿಪಾದಿಸಿದ ನೆಲ. ಸಾಂಸ್ಕೃತಿಕವಾಗಿ ಬಹಳಷ್ಟು ಗಟ್ಟಿತನ ಹೊಂದಿದೆ. ಈ ನಾಡು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಸೇವಾ ಸಂಘದ ಅಧ್ಯಕ್ಷ ಸುಭಾಷ ಚಕ್ರವರ್ತಿ, ಗೌರವ ಅಧ್ಯಕ್ಷ ಸುಭಾಷಚಂದ್ರ ನಂದೂರಕರ, ಕೆ.ಗಿರಿಮಲ್ಲ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.