ಬಾಗಲಕೋಟೆ: ಟಿಪ್ಪು ಸುಲ್ತಾನ್ ಅವರ ಜನ್ಮದಿನದಂದ್ನು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿ ಟಿಪ್ಪು ಸುಲ್ತಾನ್ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.
ನಗರಸಭೆ ಸದಸ್ಯ ಲಕ್ಷ್ಮಣ ಮುಚಖಂಡಿ ಅವರ ರೈಲು ನಿಲ್ದಾಣದ ಸಮೀಪದ ನಿವಾಸದಿಂದ ಆರಂಭ ಗೊಂಡ ಬೈಕ್ ರ್ಯಾಲಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.

ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸಲು ಆಗ್ಲರೊಂದಿಗೆ ಹೋರಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್. ಅವರು ತಾಯಿ ನಾಡಿಗಾಗಿ ಸ್ವಂತ ಮಕ್ಕಳನ್ನು ಒತ್ತೆ ಇಟ್ಟು ಹಗಲಿರುಳು ಹೋರಾಟ ನಡೆಸಿದ್ದಾರೆ. ಇಂತಹ ಮಹಾನ್ ದೇಶ ಭಕ್ತನ ಜನ್ಮದಿನವನ್ನು ಆಚರಣೆ ಮಾಡುವ ಸಂದರ್ಭ ದಲ್ಲಿ ಸರ್ಕಾರಿ ರಜೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಎಲ್ಲ ಶಿಕ್ಷಣ ಸಂಸ್ಥೆ, ಸರ್ಕಾರಿ ಕಛೇರಿಗಳಲ್ಲಿ ದೇಶಭಕ್ತ ಟಿಪ್ಪು ಸುಲ್ತಾನ್ ಜನ್ಮದಿನವನ್ನು ಆಚರಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಜೆಡಿಎಸ್ನಿಂದ ಗಾಂಧಿ ಜಯಂತಿ ಆಚರಣೆ
ಬಾಗಲಕೋಟೆ: ನಗರದ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗಾಂಧಿಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ಬಹದ್ದೂರ್ ಶಾಸ್ತ್ರಿ ಜಯಂತಿ ಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ ಅವರು ಸತ್ಯ, ಶಾಂತಿ, ಹಿಂಸೆ ಹಾಗೂ ಮಾನವೀಯ ಮೌಲ್ಯಗಳನ್ನು ವಿಶ್ವಕ್ಕೆ ಸಾರಿದ ಮಹಾ ಮಾನವತಾವಾದಿಯ ವಿಚಾರಧಾರೆಗಳು ಇಂದಿನ ಜನಾಂಗಕ್ಕೆ ಅಗತ್ಯವಿದೆ ಎಂದರು.

ಶಂಭು ಅಕ್ಕಿಮರಡಿ, ಸಂಗಪ್ಪ ನಾರಾಯಣಿ, ಸಲೀಂ ಮೋಮಿನ್, ಎ.ಆರ್.ಮೋರೆ, ಹಣಮಂತ ಕಳ್ಳಿಮನಿ, ರಘುಪತಿ ರಾಜಾರಾಮ, ಸಲೀಂ ಮೋಮಿನ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.