ಮಂಗಳವಾರ, ಮೇ 18, 2021
24 °C

ದಲಿತ-ಸವರ್ಣಿಯರ ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ತಾಲ್ಲೂಕಿನ ಕಣಬೂರ ಗ್ರಾಮದಲ್ಲಿ ಸವರ್ಣಿಯರು ಹಾಗೂ ದಲಿತರ ಮಧ್ಯೆ ಘರ್ಷಣೆ ಸಂಭವಿಸಿ,  ಹೆಚ್ಚಿನ ಸಂಖ್ಯೆ ಯಲ್ಲಿ ದಲಿತರು ಗಾಯಗೊಂಡಿದ್ದಾರೆ.ಭಾನುವಾರ ತಡ ರಾತ್ರಿ ಈ ಘಟನೆ ನಡೆದಿದೆ. ದೂರು-ಪ್ರತಿ ದೂರು ದಾಖ ಲಾಗಿವೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.ಘರ್ಷಣೆಯಲ್ಲಿ ಗಾಯಗೊಂಡಿರುವ ದಲಿತ ಮುಖಂಡರಾದ ಶಿವಾನಂದ ಹುಚ್ಚಪ್ಪ ದೊಡಮನಿ (35), ಸದಾ ಶಿವ ಮಳೆಪ್ಪ ಚಲವಾದಿ (35), ಈರಪ್ಪ ಬಾಳಪ್ಪ ಚಲವಾದಿ (38), ಹಣಮಂತ ಗಂಗಪ್ಪ ಚಲವಾದಿ (37), ಅಶೋಕ ಚಲವಾದಿ, ಚೆನ್ನಪ್ಪ ವಿಠ್ಠಲ ಚಲವಾದಿ ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.`ಸವರ್ಣಿಯರು ದಲಿತ ಮಹಿಳೆಯರ ಮೇಲೂ ದೌರ್ಜನ್ಯ ನಡೆಸಿದ್ದಾರೆ. ಗರ್ಭಿಣಿ ಪೂರ್ಣಿಮಾ ಪರಶುರಾಮ ಚಲವಾದಿ ಮೇಲೆ ಹಲ್ಲೆ ಮಾಡಿದ್ದು, ಆಕೆಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ~ ಎಂದು ಗಾಯಾಳು ಗಳು ದೂರಿದ್ದಾರೆ.`ಕಣಬೂರ ಗ್ರಾಮದ ರಾಚೋಟೇ ಶ್ವರ ದೇವಾಲಯ ಎದುರಿನ ಚಹಾ ಅಂಗಡಿಯ ಪಕ್ಕದ ಗ್ರಾಮ ಪಂಚಾ ಯಿತಿಗೆ ಸೇರಿದ ಖುಲ್ಲಾ ಜಾಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ ಹೆಸರಿನಲ್ಲಿ ಧ್ವಜ ಕಟ್ಟೆ ಮತ್ತು ಸ್ತಂಭವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿ ರಲಿಲ್ಲ. ಅಲ್ಲದೆ ಊರಿನ ಜನ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ದಲಿತರು ಮತ್ತು ಸವರ್ಣಿಯರ ಮಧ್ಯೆ ವೈಷಮ್ಯ ಉಂಟಾಗಿತ್ತು~ ಎಂದು ಪ್ರಭಾರ ಎಸ್ಪಿ ಎಂ.ಎ. ಟ್ರಾಸ್ಗರ್ ತಿಳಿಸಿದ್ದಾರೆ.`ಡಾ.ಬಿ.ಆರ್. ಅಂಬೇಡ್ಕರ ಕಟ್ಟೆ ಯನ್ನು ಸವರ್ಣಿಯರು ಒಡೆದು ಹಾಕಿ ್ದದಾರೆ. ಅದಕ್ಕೆ ಪ್ರತಿಕಾರವಾಗಿ ದಲಿತರು, ಊರಲ್ಲಿಯ ಮಾರುತಿ ದೇವಾಲಯದ ಎದುರಿನ ಭಗವಾ ಧ್ವಜ ಕಂಬ ಮತ್ತು ಕಟ್ಟೆಯನ್ನು ಒಡೆದು ಹಾಕಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಕಲ್ಲು ತೂರಾಟದಲ್ಲಿ ತೊಡಗಿದರು. ದಲಿತರ ಕಡೆಯ ಶಿವಾನಂದ ಹುಚ್ಚಪ್ಪ ದೊಡಮನಿ ಮತ್ತು ನಾಲ್ವರು, ಸವರ್ಣಿಯರ ಕಡೆಯ ಚಿಕ್ಕಯ್ಯ ಶಂಕ್ರಯ್ಯ ಮಠದ ಮತ್ತು ಇತರ ನಾಲ್ವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ~ ಎಂದು ಅವರು ಹೇಳಿದ್ದಾರೆ.ಗ್ರಾಮದಲ್ಲಿ ಶಾಂತಿ ಭಂಗವಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಉಭಯ ಪಂಗಡಗಳವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದೂ ತಿಳಿಸಿದ್ದಾರೆ.ಮಲ್ಲನಗೌಡ ನಿಂಗನಗೌಡ ಪಾಟೀಲ ಹಾಗೂ ಇತರ 45 ಜನರ ವಿರುದ್ಧ ಶಿವಾನಂದ ಹುಚ್ಚಪ್ಪ ದೊಡಮನಿ ದೂರು ನೀಡಿದ್ದಾರೆ. ಅವರೆಲ್ಲರ ವಿರುದ್ಧ ಕೊಲೆ ಯತ್ನ, ದಲಿತರ ಮೇಲೆ ದೌರ್ಜನ್ಯ ಮತ್ತಿತರ ಪ್ರಕರಣಗಳ ಅಡಿ ಮೊಕದ್ದವೆು ದಾಖಲಿಸಿಕೊಳ್ಳಲಾಗಿದೆ.ಸವರ್ಣಿಯ ಸಂತೋಷ ರಾಚಪ್ಪಗೌಡ ಪಾಟೀಲ ನೀಡಿದ ದೂರಿನನ್ವಯ  ಸಿದ್ದಪ್ಪ ಹುಚ್ಚಪ್ಪ ಚಲವಾದಿ, ಗಂಗಪ್ಪ ಹಣಮಪ್ಪ ಮಹರ, ಈರಪ್ಪ ಬಾಳಪ್ಪ ಚಲವಾದಿ, ರಾಚಪ್ಪ ಯಮನಪ್ಪ ಕೊಂತಿಕಲ್ಲ, ಸದಾಶಿವ ಮಳೆಪ್ಪ ಮಹರ, ರುದ್ರಪ್ಪ ವಿಠ್ಠಲ ಚಲವಾದಿ, ರಾಚಪ್ಪ ನಿರೂಪಾದಿ ಚಲವಾದಿ, ಪ್ರವೀಣ ಹಣಮಂತ ಚಲವಾದಿ, ಬಸವರಾಜ ರಾಮಪ್ಪ ಚಲವಾದಿ, ಸಂತೋಷ ಭೀಮಪ್ಪ ಚಲವಾದಿ, ಬಸಪ್ಪ ಚಂದ್ರಪ್ಪ ರೊಳ್ಳಿ, ಶೆಟ್ಟಪ್ಪ ಸಿದ್ದಪ್ಪ ರಬಕವಿ, ಮಲ್ಲಪ್ಪ ಸಿದ್ದಪ್ಪ ರಬಕವಿ, ವಿನಯ್ (ವಿನೋದ) ತುಕಾರಾಮ ಚಕ್ರವರ್ತಿ ಅವರ ವಿರುದ್ಧ ಬಬಲೇಶ್ವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.