ವಾಷಿಂಗ್ಟನ್ (ಪಿಟಿಐ): ನಾಗರಿಕ ಉದ್ದೇಶಕ್ಕಾಗಿ ಪರಮಾಣು ಶಕ್ತಿ ಬಳಕೆಗೆ ಸಹಕಾರ ಸೇರಿದಂತೆ ಸಮಗ್ರವಾಗಿ ಭಾರತ- ಅಮೆರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿ ಮಹತ್ತರ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಭಾರತದ ರಾಯಭಾರಿ ನಿರುಪಮಾ ರಾವ್ ಚರ್ಚೆ ನಡೆಸಿದ್ದಾರೆ.

ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ತರುವಾಯ ಇಲ್ಲಿನ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ಇದೇ ಮೊದಲ ಬಾರಿಗೆ ಮಾತುಕತೆ ನಡೆಸಿರುವ ನಿರುಪಮಾ ರಾವ್, ಇರಾನ್ ಮೇಲೆ ಹೇರಿರುವ ನಿರ್ಬಂಧ ಹಾಗೂ ಮ್ಯಾನ್ಮಾರ್, ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದ್ದಾರೆ.

`ದ್ವಿಪಕ್ಷೀಯ ಸಂಬಂಧ ಕುರಿತು ವಿವರವಾಗಿ ಚರ್ಚಿಸಿದ ಉಭಯ ದೇಶಗಳ ಪ್ರಮುಖರು, ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸಲು ಒಟ್ಟಾಗಿ ಶ್ರಮಿಸಲು ಸಮ್ಮತಿಸಿದ್ದಾರೆ~ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನ್ಯೂಲೆಂಡ್ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ನಾಗರಿಕ ಉದ್ದೇಶಕ್ಕಾಗಿ ಪರಮಾಣು ಶಕ್ತಿ ಬಳಕೆಗೆ ಭಾರತಕ್ಕೆ ಸಹಕಾರ ನೀಡಲು ಅಮೆರಿಕ ಸಿದ್ಧವಿದೆ. ತನ್ನಲ್ಲಿರುವ ಪರಮಾಣು ತಂತ್ರಜ್ಞಾನದ ನೆರವನ್ನೂ ನೀಡುವುದಾಗಿ ಅಮೆರಿಕ ಭರವಸೆ ನೀಡಿದೆ~ ಎಂದು ವಕ್ತಾರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.