ಶುಕ್ರವಾರ, ಜನವರಿ 24, 2020
28 °C

ಪಾಕ್‌ ಮೊಬೈಲ್‌ ಜಾಹೀರಾತಿನಲ್ಲಿ ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಇಸ್ಲಾಮಾಬಾದ್ (ಪಿಟಿಐ): ಬಾಲಿ­ವುಡ್‌ ನಟಿ ಕರೀನಾ ಕಪೂರ್‌ ಪಾಕಿ­ಸ್ತಾನ­ದಲ್ಲಿ ಭಾರಿ ಬೇಡಿಕೆಯ ಮೊಬೈಲ್ ಬ್ರ್ಯಾಂಡ್‌, ‘ಕ್ಯೂ ಮೊಬೈಲ್ಸ್’ ಕಂಪೆನಿಯ ರಾಯಭಾರಿ ಯಾಗಿ ಕಾರ್ಯನಿರ್ವಹಿಸಲಿದ್ದಾರೆ.‘ಕರೀನಾ ಅವರು ಹೆಚ್ಚಿನ ಅಭಿಮಾನಿ ಬಳಗ ಹೊಂದಿರು­ವುದರಿಂದ ಅವರನ್ನು ಕಂಪೆನಿ ರಾಯಭಾರಿಯಾಗಿ ಆಯ್ಕೆ ಮಾಡ­ಲಾ­ಗಿದ್ದು, ದೇಶದ ಮೊಬೈಲ್ ಮಾರಾಟ ವಲಯ­ದಲ್ಲೇ ಇದು ಅತ್ಯಂತ ದುಬಾರಿ ಜಾಹೀರಾತಾಗಿದೆ’ ಎಂದು ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಜೀಷಾನ್ ಖುರೇಶಿ ಹೇಳಿದ್ದಾರೆ.ಭಾರತದ ಮತ್ತೊಬ್ಬ ನಟಿ ಜ್ಯೂಹಿ ಚಾವ್ಲಾ ಸಹ ಪಾಕ್‌­ನಲ್ಲಿ ಖಾದ್ಯ ತೈಲದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)