ಮಂಗಳವಾರ, ಜನವರಿ 21, 2020
19 °C

ಪುಟಿಯುವ ಉತ್ಸಾಹಕ್ಕೆ ಗೆಲುವೆ ಚಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಿಯುತ್ತಿದ್ದ ಮಳೆ, ತೇಲಿ ಬರುತ್ತಿದ್ದ ಚಳಿ ಗಾಳಿಯನ್ನು ಸಹ ಲೆಕ್ಕಿಸದೇ `ಆ ಕ್ರೀಡಾಪಟು~ಗಳು ಗೆಲುವಿಗಾಗಿ ಓಡುತ್ತಿದ್ದರು, ಜಿಗಿಯುತ್ತಿದ್ದರು.ಇದೇ ಮೊದಲ ಬಾರಿಗೆ ಮಧುಗಿರಿ ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಂಗವಿಕಲ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳ ಮೊಗದಲ್ಲಿ ಆತ್ಮವಿಶ್ವಾಸ ತುಂಬಿ ತುಳಕುತ್ತಿತ್ತು.14 ಹಾಗೂ 17 ವರ್ಷದೊಳಗಿನ ಕ್ರೀಡಾಪಟುಗಳ ಸ್ಪರ್ಧಾ ಮನೋಭಾವನೆಗೆ ಯಾವುದೇ ದೈಹಿಕ ದೌರ್ಬಲ್ಯ ಎದುರಾಗಲಿಲ್ಲ.14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಸಿದ್ದರಾಜು (ಗುಂಡು ಎಸೆತ), ಮನು (ಜಾವಲಿನ್), ರಮೇಶ್ (ಗುಂಡು ಎಸೆತ), ಹರೀಶ್ ಕುಮಾರ್ (ಜಾವಲಿನ್), ನವೀನ್ ಕುಮಾರ್ (ಉದ್ದ ಜಿಗಿತ ) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದರು.ಬಾಲಕಿಯರ ವಿಭಾಗದಲ್ಲಿ ಜಿ.ಎನ್.ಚೇತನಾ (50 ಮೀ ಓಟ), ಜಿ.ಎಸ್.ಲಕ್ಷ್ಮೀ (ಗುಂಡು ಎಸೆತ), ನಯನಾ (ಜಾವಲಿನ್), ಧನಲಕ್ಷ್ಮೀ (ಗುಂಡು ಎಸೆತ), ಲಾವಣ್ಯ (50 ಮೀ ಓಟ) ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.17 ವರ್ಷದೊಳಗಿನ ವಿಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ನಿಖಿಲ್ (ಗುಂಡು ಎಸೆತ), ಜಗದೀಶ್ ನಾಯಕ್ (ಗುಂಡು ಎಸೆತ, ಉದ್ದ ಜಿಗಿತ), ಎಂ.ಆರ್.ರಮೇಶ್ (ಗುಂಡು ಎಸೆತ), ನವೀನ್ ಕುಮಾರ್ (ಜಾವಲಿನ್ ಹಾಗೂ 100 ಮೀ), ಬಾಲಕಿಯರ ವಿಭಾಗದಲ್ಲಿ ಶ್ರಿದೇವಿ (ಗುಂಡು ಎಸೆತ), ರಮ್ಯಾ (ಉದ್ದ ಜಿಗಿತ), ಲಾವಣ್ಯ (ಗುಂಡು ಎಸೆತ), ರತ್ನಮ್ಮ (ಜಾವಲಿನ್), ಚಂದನಾ (100 ಮೀ) ಗೆಲುವಿನ ನಗೆ ಬೀರಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.ದೈಹಿಕ ಸಾಮರ್ಥ್ಯ ಆಧಾರದ ಮೇಲೆ ನಡೆದ ಪ್ರದರ್ಶನದಲ್ಲಿ ಸಿಕ್ಕ ಅವಕಾಶವನ್ನು ಕ್ರೀಡಾಪಟುಗಳು ಸಮರ್ಥವಾಗಿ ಬಳಸಿಕೊಂಡರು.

 

ಪ್ರತಿಕ್ರಿಯಿಸಿ (+)