ರಾತ್ರಿಯ ನೀರವತೆಗೆ ಉನ್ಮಾದದ ಅಬ್ಬರ ತುಂಬಿದ್ದು ಕಿವಿಗಡಚುವ ಬ್ಯಾಂಡ್ನ ಸದ್ದು. ಈಜುಕೊಳದ ಅರ್ಧಭಾಗಕ್ಕೆ ಚಾಚಿಕೊಂಡಿದ್ದ ಪ್ ಸುತ್ತಲೂ ಬೆಳಕಿನ ಪುಗ್ಗಗಳು ತೇಲುತ್ತಿದ್ದವು. ಆಕರ್ಷಕವಾಗಿ ಸಜ್ಜಾಗಿದ್ದ ಸ್ಟೇಜ್ನ ಮಧ್ಯಭಾಗದಲ್ಲಿ ‘ಎಫ್–ಟೀವಿ’ಯ ಲೋಗೊ ಮಿನುಗುತ್ತಿತ್ತು.

ಸ್ವಿಮ್ಮಿಂಗ್ಪೂಲ್ನ ಸುತ್ತ ನಿಂತು ವೋಡ್ಕಾ ಹೀರುತ್ತಿದ್ದ ಫ್ಯಾಷನ್ ಪ್ರಿಯರು ಮುಖದ ಭಾವಗಳು ಎಲ್ಇಡಿ ಬೆಳಕಿನ ಸರಿದಾಟದಲ್ಲಿ ಮಿಂಚಿ ಮರೆಯಾಗುತ್ತಿದ್ದವು. ವೋಡ್ಕಾ ನಶೆ ಏರುತ್ತಿದ್ದಂತೆ ಇತ್ತ ಯಾಂಪ್ ಮೇಲೆ ವಿದೇಶಿ ರೂಪದರ್ಶಿಗಳು ಮಿಂಚು ಹರಿಸತೊಡಗಿದರು.

ಅಂದಹಾಗೆ, ಅದು ‘ಎಫ್–ಟೀವಿ’ಯ ಅಂಗಸಂಸ್ಥೆಯಾದ ಎಫ್ ಬಿವರೇಜಸ್ ಲಿಮಿಟೆಡ್ ಆಯೋಜಿಸಿದ್ದ ಫ್ಯಾಷನ್ ಪಾರ್ಟಿ ಕಲೆಕ್ಷನ್ನ ಫ್ಯಾಷನ್ ಷೋ ಮತ್ತು ಫ್ಯಾಷನ್ ವೋಡ್ಕಾ ಬಿಡುಗಡೆ ಕಾರ್ಯಕ್ರಮ. ಎಲ್ಇಡಿ ಬಟ್ಟೆ ಧರಿಸಿ ರೂಪದರ್ಶಿಯೊಬ್ಬಳು ಪ್ರದರ್ಶಿಸಿದ ಎಲ್ಇಡಿ ನೃತ್ಯ, ಡಿಜೆ ಹೆಲೆನ್ ಸ್ವಾನ್ ಅವರ ಸಂಗೀತ, ಮತ್ತೊಬ್ಬ ಸುಂದರಿಯ ಖತರ್ನಾಕ್ ಫೈರ್ ಡಾನ್ಸ್ (ಬೆಂಕಿ ನೃತ್ಯ) ಹಾಗೂ ಆರು ಅಡಿಗಿಂತಲೂ ಎತ್ತರವಿದ್ದ ರಷ್ಯಾ, ಇಟಲಿ, ಯುಗೊಸ್ಲೋವಿಯಾ ಮೊದಲಾದ ದೇಶಗಳ ವಿದೇಶಿ ರೂಪದರ್ಶಿಗಳ ನಾಜೂಕಿನ ನಡಿಗೆ ಮತ್ತು ವಿನ್ಯಾಸಕಿ ಮಿಷೆಲ್ ಸಾಲಿನ್ಸ್ ಅವರ ಆಪರ್ಷಕ ಪಾರ್ಟಿ ಕಲೆಕ್ಷನ್ ಇವೆಲ್ಲವೂ ಈ ಕಾರ್ಯಕ್ರಮದ ಪ್ರಮುಖ ಆರ್ಕಷಣೆಯಾಗಿದ್ದವು.

ಬೆಂಗಳೂರಿಗೆ ಲಗ್ಗೆ ಇಟ್ಟಿದ್ದ ಫ್ಯಾಷನ್ ಪಾರ್ಟಿ ಕಲೆಕ್ಷನ್ ಅನ್ನು ಕಣ್ತುಂಬಿಕೊಂಡ ನಗರಿಗರು, ಆ ವಸ್ತ್ರಗಳನ್ನು ತೊಟ್ಟು ಬೀಗಿದ ರೂಪದರ್ಶಿಗಳನ್ನೂ ನೋಡಿ ಪುಳಕಗೊಂಡರು. ಸ್ಥಳೀಯ ಮಾಡೆಲ್ಗಳ ಬೆಕ್ಕಿನ ನಡಿಗೆಗೂ, ಈ ಷೋನಲ್ಲಿ ಯಾಂಪ್ವಾಕ್ ಮಾಡಿದ ವಿದೇಶಿ ರೂಪದರ್ಶಿಗಳ ಕ್ಯಾಟ್ವಾಕ್ಗೂ ಅಜಗಜಾಂತರ ವ್ಯತ್ಯಾಸವಿತ್ತು. ನಮ್ಮಲ್ಲಿನ ಬಹುತೇಕ ರೂಪದರ್ಶಿಯರು ಯಾಂಪ್ ಹತ್ತಿದರೆ ಮುಖ ಬಿಗಿದುಕೊಂಡು, ನಿರ್ಭಾವುಕರಾಗಿ ಹೆಜ್ಜೆ ಹಾಕುತ್ತಾರೆ. ಆದರೆ, ಫ್ಯಾಷನ್ ಪಾರ್ಟಿ ಕಲೆಕ್ಷನ್ ಪ್ರದರ್ಶಿಸಲು ಬಂದಿದ್ದ ವಿದೇಶಿ ರೂಪದರ್ಶಿಗಳು ಮಾತ್ರ ರ್್ಯಾಂಪ್ ಮೇಲಿನ ಪ್ರತಿ ಹೆಜ್ಜೆಯನ್ನು ಆನಂದಿಸುತ್ತಿದ್ದರು. ಯಾಂಪ್ ಮೇಲೆ ಹೀಗೆ ನಡೆಯಬೇಕು ಎಂಬ ಸಂಪ್ರದಾಯವನ್ನು ಮುರಿದು ತುಂಬ ಲೈವ್ಲಿಯಾಗಿ ರ್್ಯಾಂಪ್ವಾಕ್ ಮಾಡಿದ್ದು ಫ್ಯಾಷನ್ಪ್ರಿಯರಿಗೆ ತುಂಬ ಮಜ ನೀಡಿತು.

ಮೊದಲಿಗೆ ರ್್ಯಾಂಪ್ ಮೇಲೆ ಕಾಣಿಸಿಕೊಂಡಿದ್ದು ಎಲ್ಇಡಿ ಸುಂದರಿ. ಆಕೆ ಪಾರದರ್ಶಕ ವಸ್ತ್ರ ಧರಿಸಿದ್ದಳು. ಧರಿಸಿದ್ದ ಕಂಚುಕ, ನಡುಪಟ್ಟಿ, ಕೈ–ಕಾಲು ಮತ್ತು ತಲೆಯ ಮೇಲೆಲ್ಲವೂ ಎಲ್ಇಡಿ ಬೆಳಕು ಮಿನುಗುತ್ತಿತ್ತು. ಆಕೆ ಇಂಗ್ಲಿಷ್ ಗೀತೆಯೊಂದಕ್ಕೆ ಹೆಜ್ಜೆ ಹಾಕಿ ರ್್ಯಾಂಪ್ಗೆ ಕಳೆಕಟ್ಟಿದರು. ಆನಂತರ ಅಂತರರಾಷ್ಟ್ರೀಯ ಖ್ಯಾತಿಯ ಡಿಜೆ ಹೆಲೆನ್ ಸ್ವಾನ್ ತಾವೇ ರಚಿಸಿದ ಗೀತೆಯನ್ನು ಕೇಳುಗರು ಉನ್ಮತ್ತಗೊಳ್ಳುವಂತೆ ಹಾಡಿದರು. ಆಕೆಯ ಕಂಠದಲ್ಲಿನ ಮಾದಕತೆ ರಸಿಕರನ್ನು ಸೆಳೆಯಿತು. ಆನಂತರ, ಮತ್ತೊಬ್ಬಳು ಸುಂದರಿ ಎಲ್ಲರೂ ಉಸಿರುಬಿಗಿ ಹಿಡಿಯುವಂಥ ಪ್ರದರ್ಶನ ನೀಡಿದಳು. ಆಕೆ ಮೈತುಂಬ ಬೆಂಕಿ ಹೊತ್ತಿಸಿಕೊಂಡು ವಿವಿಧ ಕಸರತ್ತುಗಳನ್ನು ಮಾಡಿದಳು. ಆ ಪ್ರದರ್ಶನ ರೋಚಕವಾಗಿತ್ತು. ‘ಫ್ಯಾಷನ್– ಟೀವಿ’ಯ ನಿರೂಪಕಿ ಅನಿಯಾ ಜೆ ಅವರು ‘ವಾಟ್ಸ್ಅಪ್ ಮ್ಯಾನ್’ ಆಲ್ಬಂನ ‘ಟ್ರಿಲಿಯನೇರ್’ ಗೀತೆಗೆ ದನಿಯಾದಾಗ ಯುವಜನತೆ ಹುಚ್ಚೆದ್ದು ಕುಣಿಯಿತು.

ಈ ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ಫ್ಯಾಷನ್ ಗುಂಗು ಮಗ್ಗುಲು ಬದಲಿಸಿತು. ಅದುವರೆಗೂ ಹಾಡು–ಕುಣಿತ ನೋಡಿ ಸಂತೋಷಗೊಂಡಿದ್ದ ಫ್ಯಾಷನ್ಪ್ರಿಯರು ಫ್ಯಾಷನ್ ಪಾರ್ಟಿ ಕಲೆಕ್ಷನ್ ನೋಡಿ ಮತ್ತಷ್ಟು ಮುದಗೊಂಡರು. ಕತ್ತು ಎತ್ತಿ ನೋಡುವಷ್ಟು ಎತ್ತರವಿದ್ದ ವಿದೇಶಿ ರೂಪದರ್ಶಿಗಳಾದ ಯಾಸ್ಮಿನ್, ನಿಕೋಲ್ಫಿರ್, ತನುಷ್ಕಾ, ನಾಡಿಯಾ ಅವರು ಪಾರದರ್ಶಕ ಪಾರ್ಟಿ ಉಡುಪು ಧರಿಸಿ ರ್್ಯಾಂಪ್ ಮೇಲೆ ಜಾಲಿಯಾಗಿ ನಡೆದಾಗ ಸೇರಿದ್ದವರೆಲ್ಲಾ ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತಾ ಅವರನ್ನು ಮೆಚ್ಚಿಕೊಂಡರು. ಅವರ ಖುಷಿಯ ಪ್ರೋತ್ಸಾಹಕ್ಕೆ ಉಬ್ಬಿದ ರೂಪದರ್ಶಿಗಳು ನಿಂತಲ್ಲೇ ಹೂ ಮುತ್ತುಗಳನ್ನು ತೇಲಿಬಿಟ್ಟರು. ವರ್ಣರಂಜಿತವಾಗಿದ್ದ ವಿವಿಧ ಬಗೆಯ ವಸ್ತ್ರಗಳನ್ನು ಪ್ರದರ್ಶಿಸಿದ ರೂಪದರ್ಶಿಗಳು ತಾಜ್ ವಿವಾಂತಾದಲ್ಲಿ ಸೇರಿದ್ದ ಎಲ್ಲ ಜನರನ್ನು ಖುಷಿಯ ಕಡಲಿನಲ್ಲಿ ತೇಲಿಸಿದರು.
–ಕೆ.ಎಂ. ಸತೀಶ್ ಬೆಳ್ಳಕ್ಕಿ
ಚಿತ್ರಗಳು: ಬಿ.ಎಚ್.ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.