ಭಾನುವಾರ, ಸೆಪ್ಟೆಂಬರ್ 22, 2019
23 °C

ಫಿನ್‌ಲೆಂಡ್‌ಗೂ ಹರಡಿದ ಭಾರತೀಯ ಖಾದ್ಯಗಳ ಪರಿಮಳ

Published:
Updated:

ಹೆಲ್ಸಿಂಕಿ/ಫಿನ್‌ಲೆಂಡ್, (ಪಿಟಿಐ):  ಇಲ್ಲಿಂದ ಸಾವಿರಾರು ಮೈಲು ದೂರದಲ್ಲಿರುವ ಭಾರತದ ಸಾದಿಷ್ಟ ಸಿಹಿ ತಿಂಡಿ, ತಿನಿಸು ಹಾಗೂ ಆಹಾರ ಖಾದ್ಯಗಳು ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ.ಗುಲಾಬ್ ಜಾಮೂನ್, ಸಮೋಸಾ, ದಾಲ್ ತಡ್ಕಾ, ಪರೋಟ, ಚಿಕನ್ ಕರಿ ಎಂದರೆ ಫಿನ್‌ಲೆಂಡ್ ಜನರಿಗೆ ಪಂಚಪ್ರಾಣ. ಹೀಗಾಗಿ ಹೆಲ್ಸಿಂಕಿಯಲ್ಲಿರುವ 20ಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿಗೆ ಸ್ಥಳೀಯರು ಮುಗಿ ಬೀಳುತ್ತಾರೆ. ಮಸಾಲೆ ಹೆಚ್ಚಿರುವ ಭಾರತೀಯ ತಿಂಡಿ, ತಿನಿಸುಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಅವು ತುಂಬಾ ದುಬಾರಿ.

Post Comments (+)