ಬೆಂಗಳೂರು: `ಹತ್ತು ಜನ ಸಾಧಕರನ್ನು ಗುರುತಿಸಿ ಮಾಚಿದೇವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು~ ಎಂದು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಪಿ.ಮಂಜುನಾಥ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಯಡಿಯೂರು ಮೂಡಲಗಿರಿ (ವಚನ ಸಾಹಿತ್ಯ), ಡಾ.ಎಚ್.ರವಿಕುಮಾರ್ (ವೈದ್ಯಕೀಯ ಕ್ಷೇತ್ರ), ಸಿ.ರಾಮಚಂದ್ರ (ಸಮಾಜ ಸೇವೆ), ರಾಮಯ್ಯ (ಶಿಕ್ಷಣ ಕ್ಷೇತ್ರ), ಓಂ.ಸಿದ್ದಪ್ಪ (ಸಂಘಟನಾ ಕ್ಷೇತ್ರ), ಸಿದ್ದಗಂಗಯ್ಯ (ಹಿಂದುಳಿದ ವರ್ಗಗಳ ಸುಧಾರಣೆಗಾಗಿ), ಎಚ್.ಸಂಪಿಗೆರಾಯಪ್ಪ (ಶಿಕ್ಷಣ ಕ್ಷೇತ್ರ) ಹಾಗೂ ಎಚ್.ಆರ್.ರಂಗನಾಥ್ (ಮಾಧ್ಯಮ ಕ್ಷೇತ್ರ) ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಲಾಗುವುದು~ ಎಂದು ಮಾಹಿತಿ ನೀಡಿದರು.

`ಪುರಭವನದಲ್ಲಿ ಆಗಸ್ಟ್ 8 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಬಡ ಮಕ್ಕಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಯಲ್ಲಿ ಶೇ 70 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಅದೇ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು~ ಎಂದು ಹೇಳಿದರು.

`ಮಡಿವಾಳರಲ್ಲಿ ಶೇ 99 ರಷ್ಟು ಜನರು ಕುಲಕಸುಬನ್ನೇ ನೆಚ್ಚಿಕೊಂಡಿದ್ದಾರೆ. ಆದ್ದರಿಂದ ಮಡಿವಾಳರ ಜೀವನಮಟ್ಟವನ್ನು ಸುಧಾರಿಸಲು ಮಡಿವಾಳರಿಗೆ ಪ್ರತ್ಯೇಕವಾದ ನಿಗಮವನ್ನು ಸ್ಥಾಪಿಸಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.