ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜ್‌ಸಿಂಗ್ ಪ್ರಮುಖ ಆಕರ್ಷಣೆ

ಫೆ.6ರಂದು ಬೆಂಗಳೂರಿನಲ್ಲಿ ಐಪಿಎಲ್‌ ಹರಾಜು: 351 ಮಂದಿ ಭಾಗಿ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಅತ್ಯಂತ ಹೆಚ್ಚು ಮೊತ್ತ ಪಡೆದ ಶ್ರೇಯ ಹೊಂದಿರುವ ಯುವರಾಜ್‌ ಸಿಂಗ್‌ ಒಂಬತ್ತನೇ ಆವೃತ್ತಿಯ ಹರಾಜಿನಲ್ಲೂ ಎಲ್ಲರ ಆಕರ್ಷಣೆ ಎನಿಸಿದ್ದಾರೆ.

ಐಪಿಎಲ್‌ ಆಡಳಿತ ಮಂಡಳಿ ಶನಿವಾರ ಹರಾಜಿಗೆ ಲಭ್ಯರಿರುವ 351 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಭಾರತದ ಯುವರಾಜ್‌, ಇಂಗ್ಲೆಂಡ್‌ ತಂಡದ ಕೆವಿನ್‌ ಪೀಟರ್‌ಸನ್‌ ಸೇರಿದಂತೆ ಎಂಟು ಮಂದಿಗೆ ಹೆಚ್ಚು ಮೂಲ ಬೆಲೆ ನಿಗದಿಮಾಡಲಾಗಿದೆ.

ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರುವರಿ 6ರಂದು ಬೆಂಗಳೂರಿನಲ್ಲಿ ನಡೆಯಲಿದೆ. 351 ಮಂದಿಯ ಪೈಕಿ ಭಾರತದ 230 ಮತ್ತು 131 ವಿದೇಶಿ ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಪಂದ್ಯ ಗಳನ್ನು ಆಡಿದ ಅನುಭವ ಹೊಂದಿರುವ 130 ವಿದೇಶಿ ಆಟಗಾರರಲ್ಲಿ 29 ಮಂದಿ ಆಸ್ಟ್ರೇಲಿಯಾದವರೇ ಇರುವುದು ಈ ಬಾರಿಯ ಹರಾಜಿನ ವಿಶೇಷ.

ದಕ್ಷಿಣ ಆಫ್ರಿಕಾ (18), ವೆಸ್ಟ್‌ ಇಂಡೀಸ್‌ (20), ಶ್ರೀಲಂಕಾ (16), ಇಂಗ್ಲೆಂಡ್‌ (7), ನ್ಯೂಜಿಲೆಂಡ್‌ (9), ಬಾಂಗ್ಲಾದೇಶ (5), ಕೆನಡಾ (2) ಮತ್ತು ಐರ್ಲೆಂಡ್‌ನ (2) ಆಟಗಾರರು ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸ್‌ಗಳ ಗಮನ ಸೆಳೆಯಲಿದ್ದಾರೆ. ಹರಾಜಿನಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದ 219 ಮಂದಿ ಇದ್ದಾರೆ. ಇದರಲ್ಲಿ ಭಾರತದ 204 ಆಟಗಾರರು ಸ್ಥಾನ ಹೊಂದಿದ್ದಾರೆ.

ಯುವರಾಜ್‌ ಮತ್ತು ಇಶಾಂತ್‌ ಶರ್ಮಾ ಅವರು ಈ ಸಲದ ಹರಾಜಿನಲ್ಲಿ ಭಾರತದ ಪೈಕಿ ಹೆಚ್ಚು ಮೊತ್ತಕ್ಕೆ ಬಿಕರಿ ಯಾಗುವ ನಿರೀಕ್ಷೆ ಇದೆ. ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಯುವರಾಜ್‌ ಅವರಿಗೆ ₹ 16 ಕೋಟಿ ನೀಡಿ ಖರೀದಿಸಿತ್ತು. ಪಂಜಾಬ್‌ನ ಎಡಗೈ ಬ್ಯಾಟ್ಸ್‌ಮನ್‌ ಟೂರ್ನಿಯಲ್ಲಿ ಪರಿಣಾಮ ಕಾರಿ ಆಟ ಆಡಲು ವಿಫಲರಾಗಿದ್ದರಿಂದ ಡೆಲ್ಲಿ ಫ್ರಾಂಚೈಸ್‌ ಯುವಿ ಅವರನ್ನು ತಂಡದಿಂದ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT