ಸಿಂದಗಿ: ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿನಿ ರಸ್ತೆಯಲ್ಲಿಯೇ ಕುಸಿದು ಬಿದ್ದು ಮೃತಳಾದ ಘಟನೆ ಗುರುವಾರ ಸಿಂದಗಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಕರಡಕಲ್ ಗ್ರಾಮದ ಪಾರ್ವತಿ ರುದ್ರಗೌಡ ಮಾಲಿಪಾಟೀಲ (17)ಮೃತಳಾದ ಯುವತಿ. ಈಕೆ ಸ್ಥಳೀಯ ಎಚ್.ಜಿ.ಪದವಿ ಪೂರ್ವ ಕಾಲೇಜು ಕಲಾ ವಿಭಾಗದ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದಳು.

ಗುರುವಾರ ಶಿಕ್ಷಣಶಾಸ್ತ್ರ ವಿಷಯದ ಷಣ್ಮಾಸಿಕ ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಾಗ ಕಾಲೇಜು ಸಮೀಪ ತಲೆ ಸುತ್ತಿ ಬಿದ್ದು ವಾಂತಿ ಮಾಡಿಕೊಂಡಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಳಾಗಿದ್ದಾಳೆಂದು ತಿಳಿದು ಬಂದಿದೆ. ಸಿಂದಗಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಕುಸುಗಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತಾಪ: ವಿದ್ಯಾರ್ಥಿನಿ ಆಕಸ್ಮಿಕ ಸಾವಿಗಾಗಿ ಎಚ್.ಜಿ. ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎ.ಎಸ್.ಬಿರಾದಾರ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.