ಶುಕ್ರವಾರ, ಜನವರಿ 24, 2020
27 °C

ಶಿಕ್ಷಣ ಕ್ಷೇತ್ರ ಮರೆಯದಿರಲಿ

–ಬಸವರಾಜ ಕುಳಲಿ,ಬೆಳಗಾವಿ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯದ ಕೆಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಅಷ್ಟೇ ಪ್ರಮುಖವಾದ  ಶಿಕ್ಷಣ ಕ್ಷೇತ್ರದ ನೂರಾರು ಸಮಸ್ಯೆಗಳು ಮರೆತು ಹೋಗಿವೆ.ಸರ್ಕಾರವೇನೋ ಹಾದಿ ಬೀದಿಗೊಂದರಂತೆ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುತ್ತಿದೆ. ಆದರೆ ಅವಕ್ಕೆ ಮೂಲ ಸೌಲಭ್ಯ ಒದಗಿಸಿ ಕೊಡುವತ್ತ ಗಮನ ಹರಿಸುತ್ತಿಲ್ಲ.ರಾಜ್ಯದ ಹಲವು ವಿಶ್ವವಿದ್ಯಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ, ವಿದ್ಯಾರ್ಥಿ ನಿಲಯಗಳ ಸೌಲಭ್ಯ ಇಲ್ಲ, ತರಗತಿ ಕೊಠಡಿಗಳ ಕೊರತೆ ಇದೆ. ಈ ಕುರಿತು ಸಮಗ್ರವಾಗಿ ಚರ್ಚೆಯಾಗಲಿ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪರಿಹಾರ ಹುಡುಕಲಿ.

ಪ್ರತಿಕ್ರಿಯಿಸಿ (+)