ಗಜೇಂದ್ರಗಡ: ಕಳೆದ ಎರಡು ದಿನ ಗಳಿಂದ ಇಲ್ಲಿನ ಎಸ್.ಎಂ.ಭೂಮರಡ್ಡಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಯೂಟ ನೀಡದೇ ಇರುವುದು ಹಾಗೂ ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿ ಗಳಿಗೆ ತಲುಪಿಸುತ್ತಿಲ್ಲ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡ ರೇಷನ್ (ಎಸ್ಎಫ್ಐ) ಕಾರ್ಯ ಕರ್ತರು ಬುಧವಾರ ಇಲ್ಲಿ ಕಾಲ ಕಾಲೇಶ್ವರ ವೃತ್ತಿಯಲ್ಲಿ ಪ್ರತಿಭಟಿಸಿ, ವಿಶೇಷ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗಳಲ್ಲಿ ಒಂದಾದ ಎಸ್.ಎಂ.ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ, ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದಾರೆ. ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಮೂಹದ ಈ ಕ್ರಮ ವನ್ನು ಪ್ರಶ್ನಿಸಿದರೆ, ಉದ್ದಟ್ಟತನದ ಮಾತುಗಳನ್ನಾಡುತ್ತಿದ್ದಾರೆ. ಇದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯನ್ನು ಶಿಕ್ಷಣ ಸಂಸ್ಥೆ ಮನಬಂದತೆ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎಸ್.ಎಫ್.ಐ ನಗರ ಘಟಕದ ಅಧ್ಯಕ್ಷ ಶಿವು ಚವ್ಹಾಣ ಆರೋಪಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಸಿ ಯೂಟ, ಉಚಿತ ಸಮವಸ್ತ್ರ, ಕಲಿಕಾ ಸಲಕರಣಿಗಳನ್ನು ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಉಚಿತ ವಾಗಿ ನೀಡುತ್ತಿದೆ. ಹೀಗಿದ್ದರೂ ಇಲ್ಲಿನ ಎಸ್.ಎಂ.ಭೂಮರಡ್ಡಿ ಶಾಲೆಯ ಸಿಬ್ಬಂದಿ ಬಿಸಿಯೂಟ ಸೇರಿದಂತೆ ಸರ್ಕಾರದ ಮಹತ್ವದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸದೆ, ಸರ್ಕಾರವನ್ನು ವಂಚಿ ಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.

ಜಿಲ್ಲೆಯಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣ ಎಂಬ ಹೆಗ್ಗಳಿಕೆ ಹೊಂದಿರುವ ಗಜೇಂದ್ರಗಡ ಪಟ್ಟಣದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲ ರೀತಿಯ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಸರ್ಕಾರಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ರೂಪಿಸಿರುವ ಶೈಕ್ಷಣಿಕ ಯೋಜನೆಗಳನ್ನು ಯಾವೊಂದು ಸಂಸ್ಥೆಯೂ ವಿದ್ಯಾರ್ಥಿ ಗಳಿಗೆ ಒದಗಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ದೂರಿದರು.

ಪಟ್ಟಣದ ಕೆಲ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಗಳಿಗೆ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಇತ್ಯಾದಿ ಸೌಕರ್ಯಗಳು ಇಲ್ಲದಿದ್ದರೂ ಇಲಾ ಖೆಯ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ದರು.

ವಿಶೇಷ ತಹಸೀಲ್ದಾರ ವೈ.ಎಂ. ದುಂಡಿಗೇರಿ ಅವರಿಗೆ ಮನವಿ ಸಲ್ಲಿಸಲಾ ಯಿತು.ಸಕ್ರಪ್ಪ ಮಾಳೋತ್ತರ, ಶಿವಾನಂದ ಬೋಸಲೆ, ಶಿವಾಜಿ ಗಡ್ಡದ, ವಿಠಲ ಹಂಚಾಟಿ, ರವಿ ಗುರಿಕಾರ, ಮೈಬು ಹುನಗುಂದ, ಕುಬೇರ ಅಜ್ಮೀರ, ಕವಿತಾ ಬಂಕದ, ಪ್ರೇಮಾ ಇಂಜನಿ, ಮೇಘಾ ದೇವರಡ್ಡಿ, ಶರಣಮ್ಮ ಮಲ್ಲಾಡದ, ನೇತ್ರಾವತಿ ಆಶಾಪೂರ, ಶೋಭಾ ಬಡಿಗೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.