ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13,475 ಮಕ್ಕಳಿಂದ ಯೋಗ ಪ್ರದರ್ಶನ

ಕಾರ್ಕಳ ತಾಲ್ಲೂಕಿನಾದ್ಯಂತ ಬೃಹತ್ ಯೋಗ ಪ್ರಾತ್ಯಕ್ಷಿಕೆ-
Last Updated 14 ಡಿಸೆಂಬರ್ 2013, 7:09 IST
ಅಕ್ಷರ ಗಾತ್ರ

ಕಾರ್ಕಳ: ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಶಾಂತಿವನ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ನಡೆದ ಬೃಹತ್ ಯೋಗ ಪ್ರಾತ್ಯಕ್ಷಿಕೆ ‘ಭವಿಷ್ಯತ್ತಿಗಾಗಿ ಯೋಗ’ ಕಾರ್ಯ­ಕ್ರಮದಲ್ಲಿ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಭಾಗ­ವಹಿಸಿದರು.

ತಾಲ್ಲೂಕಿನ ೮  ಕಡೆಗಳಲ್ಲಿ ಬೃಹತ್ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸ­ಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ಒಟ್ಟು ೧೩,೪೭೫ ಮಂದಿ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆ ಭಾಗ­ವಹಿಸಿದ್ದರು. ಪಟ್ಟಣದ ಸ್ವರಾಜ್ ಮೈದಾನದಲ್ಲಿ ನಡೆ­ದ ಯೋಗ ಕಾರ್ಯಕ್ರಮದಲ್ಲಿ ಪೆರ್ವಾಜೆ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾ­ಧ್ಯಾಯಿನಿ ಕೆ. ಹರ್ಷಿನಿ, ಎಸ್.ವಿ.ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು, ತಾಲ್ಲೂ­ಕು ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ, ದೈಹಿಕ ಶಿಕ್ಷಕ ಕೃಷ್ಣಪ್ಪ, ವಲಯಾಧ್ಯಕ್ಷ ವಿದ್ಯಾನಂದ್ ಶೆಟ್ಟಿಗಾರ್, ಜೇಸೀಸ್ ಸ್ಕೂಲ್ ಪ್ರಾಂಶುಪಾಲೆ ಮೋಹಿ­ನಿ ನಾಯಕ್,  ಉಷಾ, ಹಿರಿಯ ಅಧಿಕಾರಿ ನಾರಾಯಣ ಇದ್ದರು.

ಪಟ್ಟಣದ ಗಾಂಧೀ ಮೈದಾನದಲ್ಲಿ ಕ್ರೈಸ್ಟ್ ಕಿಂಗ್ ಪಪೂ ಕಾಲೇಜಿನ ಪ್ರಾಂಶುಪಾಲ ನಾರಾಯಣ್ ಶೇಡಿಕಜೆ, ಸರ್ಕಾರಿ ಪಪೂ ಕಾಲೇಜಿನ ಮಾಧವ ಭಟ್ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮಕ್ಕೆ ಚಾಲ­ನೆ ನೀಡಿದರು. ನಿಟ್ಟೆ ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನಲ್ಲಿ  ಪ್ರಾಂಶುಪಾಲೆ ಇಂದಿರಾ ಕೆ, ಎನ್.ಎಮ್.ಎ.ಎಮ್. ಪಾಲಿಟೆಕ್ನಿಕ್ ನಿಟ್ಟೆಯ ದೈಹಿಕ ಶಿಕ್ಷಕ ಮುರಳೀಧರ್ ಶರ್ಮ, ಅರವಿಂದ, ಉದ್ಯಮಿ  ಅಶೋಕ್ ಅಡ್ಯಂತಾಯ, ಕೃಷಿಕ ನವೀನ್ ಚಂದ್ರ ಜೈನ್, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಸಾಲ್ಯಾನ್, ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಂತ್ ಕಾಮತ್ ಇದ್ದರು.

ಬೆಳ್ಮಣ್‌ನ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸತೀಶ್, ಧರ್ಮಗುರು ರೆ.ಫಾ., ರಿತೇಶ್ ಶೆಟ್ಟಿ ಶಿಕ್ಷಕರು ಸೂಡ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜನಾರ್ಧನ ಭಟ್, ಶಿಕ್ಷಕ ವಿ.ಕೆ. ರಾವ್ ನಂದಳಿಕೆ, ಸಂದೀಪ್,  ರಾಜೀವ್ ಶೆಟ್ಟಿ ಇದ್ದರು. ಅಜೆಕಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಜಾಗೃತಿ ವಲಯಾಧ್ಯಕ್ಷೆ ಯಶೋದ ಶೆಟ್ಟಿ, ಪಂಚಾಯಿತಿ ಸದಸ್ಯ ಕೃಷ್ಣ ನಾಯಕ್, ಹರೀಶ್, ವಲಯಾಧ್ಯಕ್ಷ ಪ್ರಭಾಕರ್ ನಾಯಕ್, ಆರೋಗ್ಯ ವೈದ್ಯಾಧಿಕಾರಿ ಹೇಮಾ, ಒಕ್ಕೂಟದ ಅಧ್ಯಕ್ಷ- ಪದಾಧಿಕಾರಿಗಳು ಇದ್ದರು.

ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ.ಪಂ. ಸದಸ್ಯ ಮಂಜುನಾಥ್ ಪೂಜಾ­ರಿ, ತಾ.ಪಂ. ಸದಸ್ಯೆ ಮಮತಾ ನಾಯಕ್,  ಗ್ರಾ.ಪಂ. ಅಧ್ಯಕ್ಷೆ ಸುಮಾ ಎನ್. ಅಡ್ಯಂತಾಯ, ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್ ಹೆಬ್ರಿ, ವಲಯಾಧ್ಯಕ್ಷ ಶಂಕರ ದೇವಾಡಿಗ, ಉಪ­ಪ್ರಾಂಶು­ಪಾಲ ದಿವಾಕರ್ ಎಸ್, ಆನಂದ ಹೆಗ್ಡೆ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT