ಪ್ರಿಟೋರಿಯಾ (ಪಿಟಿಐ): ನೆಲ್ಸನ್ ಮಂಡೇಲಾ ಅವರ ತತ್ವ- ಸಿದ್ಧಾಂತ, ಜೀವನದ ಮೌಲ್ಯಗಳನ್ನು ಮುಂದಿನ ಪೀಳಿಗೆಯವರಿಗೂ ಜೀವಂತವಾಗಿಸುವಂತೆ ದಕ್ಷಿಣ ಆಫ್ರಿಕಾ ಸರ್ಕಾರ ದೇಶದ ಪ್ರಜೆಗಳಿಗೆ ಮನವಿ ಮಾಡಿದೆ.

ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ನೆಲ್ಸನ್ ಮಂಡೇಲಾ ಅವರ 95ನೇ ಹುಟ್ಟುಹಬ್ಬದ (ಜುಲೈ 18) ಹಿನ್ನೆಲೆಯಲ್ಲಿ ಸರ್ಕಾರ ಈ ಮನವಿ ಮಾಡಿದೆ.

ಮಂಡೇಲಾ ಅವರ ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸಲು ಜುಲೈ 18ರಂದು ಮಂಡೇಲಾ ದಿನವನ್ನಾಗಿ ಆಚರಿಸುವಂತೆ ಮನವಿ ಮಾಡಿರುವ ಸರ್ಕಾರ, ಆ ದಿನ ಒಳ್ಳೆಯ ಕೆಲಸ, ಉತ್ತಮ ವಿಚಾರಗಳತ್ತ ಮಾತ್ರ ಗಮನ ನೀಡುವಂತೆ ಕೋರಿದೆ.

ದಕ್ಷಿಣ ಆಫ್ರಿಕಾ ಸರ್ಕಾರವು ಜುಲೈ ತಿಂಗಳನ್ನು `2013ರ ಮಂಡೇಲಾ ತಿಂಗಳು' ಎಂದು ಆಚರಿಸಲಿದ್ದು, `ಕ್ರಮ ಕೈಗೊಳ್ಳಿ, ಬದಲಾವಣೆಗೆ ಸ್ಫೂರ್ತಿಯಾಗಿ. ಪ್ರತಿ ದಿನವನ್ನೂ ಮಂಡೇಲಾ ದಿನವನ್ನಾಗಿಸಿ' ಎಂಬ ವಿಷಯದ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಸುಧಾರಿಸದ ಆರೋಗ್ಯ: ಈ ಮಧ್ಯೆ, ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡೇಲಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.