ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಡಿ ಜಲಪಾತ!

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಕಣಿವೆಯ ಮೇಲಿಂದ ಧೋ ಎಂದು ಧುಮುಕುವ ನೀರು ಬಂಡೆಯನ್ನು ಮುಟ್ಟಿ ಕೊಂಚ ಹೊತ್ತು ದಣಿವಾರಿಸಿಕೊಂಡು ಮತ್ತೆ ಧೋ ಎಂದು ಧುಮ್ಮಿಕುತ್ತದೆ. ಒಂದೇ ಜಲನಿಧಿಯ ಎರಡು ಆಯಾಮಗಳ ಮನಮೋಹಕ ದೃಶ್ಯವನ್ನು ನೋಡಬೇಕಾದರೆ ಕುಣೆ ಜಲಪಾತಕ್ಕೆ ಹೋಗಲೇಬೇಕು.

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಗೆ ಸೇರಿದ ಈ ಕುಣೆ ಜಲಪಾತ 660 ಅಡಿ ಎತ್ತರದಿಂದ ಧರೆಗಿಳಿಯುತ್ತದೆ. ಹಳೆಯ ಮುಂಬೈ- ಪುಣೆ ರಸ್ತೆಯಲ್ಲಿ ಸಾಗುವಾಗ ಈ ಜಲಪಾತದ ಅಂದವನ್ನು ದೂರದಿಂದ ಸವಿಯುವ ಅವಕಾಶ ಕೂಡ ಇದೆ.

ಪುಣೆಯ ಖ್ಯಾತ ಗಿರಿಧಾಮ ಲೊನಾವಳ ಮತ್ತು ಖಂಡಾಲ ಕಣಿವೆ ಪ್ರದೇಶಗಳಲ್ಲಿ ಭೋರ್ಗರೆಯುತ್ತದೆ ಕುಣೆ. ಮೂಲ ನದಿ ಸೃಷ್ಟಿಸಿದ ಈ ಸುಂದರ ಜಲಪಾತವನ್ನು ನೋಡಲು ಪ್ರವಾಸಿಗರ ಹಿಂಡೇ ಬರುತ್ತದೆ. ಗಿರಿಯನ್ನು ಸುತ್ತು ಬಳಸಿ ಸಾಗಿದಂತೆ ಕಾಣುವ ಈ ಜಲಪಾತದ ಅಂದಕ್ಕೆ ಮನಸೋಲದವರೇ ಇಲ್ಲ.

ದಟ್ಟ ಹಸಿರು ತುಂಬಿದ ಕಾಡಿನ ನಡುವೆ ಬೆಳ್ನೊರೆಯಂತೆ ಹರಿದು ಸಾಗುವ ಈ ನೀರು ಹಸಿರನ್ನು ಹಸಿರಾಗಿಯೇ ಇರುವಂತೆ ಕಾಯ್ದುಕೊಳ್ಳುತ್ತದೆ. ಖಂಡಾಲ ಗಿರಿಧಾಮಕ್ಕೆ ಭೇಟಿ ನೀಡಿದವರು ಈ ಸುಂದರ ಜಲನಿಧಿಯನ್ನು ನೋಡದಿದ್ದರೆ ಅವರ ಪ್ರವಾಸ ಅಪೂರ್ಣವಾದಂತೆಯೇ ಸರಿ.

ವರ್ಷವಿಡೀ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ರಸ್ತೆ ಮಾರ್ಗದೊಂದಿಗೆ ಕಾಡಿನ ದಾರಿಯೂ ಇದೆ. ಕಾಡ ದಾರಿಯಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ಜಲಪಾತದ ದರ್ಶನ ಮಾಡುವುದೇ ಒಂದು ಸೊಬಗು. ಲೊನಾವಳದಿಂದ ಕೇವಲ ಎರಡೂವರೆ ಕಿಮೀ ದೂರ ಇರುವುದರಿಂದ ಅಲ್ಲಿಂದ ನಡೆದು ಹೋದರೂ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT