ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ರಿಂದ ಕುಸ್ತಿ ಪಂದ್ಯಾವಳಿ

Last Updated 21 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಸಾಗರ: ಮಾರಿಕಾಂಬಾ ಜಾತ್ರೆಯ ಅಂಗವಾಗಿ ಫೆ. 27ರಿಂದ ಮಾರ್ಚ್ 1ರವರೆಗೆ ನೆಹರು ಮೈದಾನದಲ್ಲಿ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಹಾಗೂ ಕುಸ್ತಿ ಸಮಿತಿ ಸಂಚಾಲಕ ಎಸ್.ವಿ. ಕೃಷ್ಣಮೂರ್ತಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಖ್ಯಾತ ಪೈಲ್ವಾನರಲ್ಲದೇ ಹೊರರಾಜ್ಯದ ಮಲ್ಲರೂ ಸೇರಿದಂತೆ 500ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಸ್ಪರ್ಧಾಳುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ‘ಮಾರಿಕಾಂಬಾ ಮಲ್ಲ’, ‘ಮಾರಿಕಾಂಬಾ ಕೇಸರಿ’, ‘ಮಾರಿಕಾಂಬಾ ಶ್ರೀ’ ಎಂಬ ಬಿರುದುಗಳನ್ನು ಪೈಲ್ವಾನರಿಗೆ ಪ್ರಧಾನ ಮಾಡಲಾಗುವುದು. ಒಟ್ಟು ್ಙ 3 ಲಕ್ಷ  ನಗದು, ಬೆಳ್ಳಿ ಗದೆ ಹಾಗೂ ಬಂಗಾರದ ಬಳೆಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷ ಎ. ಬೋಜಪ್ಪ ಅವರ ಹೆಸರಿನಲ್ಲಿ ವಿಶೇಷ ಕುಸ್ತಿ ಏರ್ಪಡಿಸಲಾಗಿದೆ. ಜಾನಪದ ಶೈಲಿಯಲ್ಲಿ ಅಖಾಡ ಹಾಗೂ ವೇದಿಕೆಯನ್ನು ನಿರ್ಮಿಸಲಾಗುವುದು. ಫೆ. 27ರಂದು ಮಧ್ಯಾಹ್ನ 2ಕ್ಕೆ  ಸಂಸದ ಬಿ.ವೈ. ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.

ಜಿಲ್ಲಾಧಿಕಾರಿ ಪೊನ್ನುರಾಜ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಕುಸ್ತಿ ಸಮಿತಿ ಸದಸ್ಯರಾದ ದೇವೇಂದ್ರ, ಎಚ್.ಆರ್. ಶ್ರೀಧರ್, ಜೇಡಿಕುಣಿ ಮಂಜುನಾಥ್, ಎಸ್.ಎಸ್. ರಮೇಶ್, ಲೋಕೇಶ್, ಧರ್ಮಪ್ಪ, ಮೋಹನ್, ಶಿವಪ್ಪ, ಸುರೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT