ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಉಳಿತಾಯಕ್ಕೆ ಹೆಚ್ಚು ಬಡ್ಡಿ

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂಚೆ ಕಚೇರಿಗಳು ನಿರ್ವಹಿಸುವ ಉಳಿತಾಯ ಯೋಜನೆಗಳಿಗೆ ಡಿಸೆಂಬರ್ 1ರಿಂದ ಹೆಚ್ಚು ಬಡ್ಡಿ ದೊರೆಯಲಿದೆ.

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಹಣ ತೊಡಗಿಸಿದವರು, ಸಣ್ಣ ಠೇವಣಿದಾರರು ಮತ್ತು ಅಂಚೆ ಕಚೇರಿಗಳು ನಿರ್ವಹಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಿರುವವರು  ಇನ್ನು ಮುಂದೆ ಹೆಚ್ಚಿನ ಪ್ರಮಾಣದ ಬಡ್ಡಿ ಪಡೆಯಲಿದ್ದಾರೆ.

`ಪಿಪಿಎಫ್~ನ ಬಡ್ಡಿ ದರಗಳನ್ನು ಸದ್ಯದ ಶೇ 8ರಿಂದ ಶೇ 8.6ಕ್ಕೆ ಹೆಚ್ಚಿಸಲಾಗಿದೆ. ಈ ನಿಧಿಗೆ ವಾರ್ಷಿಕ ಕೊಡುಗೆಯನ್ನು ಸದ್ಯದ ರೂ 70 ಸಾವಿರದಿಂದ ರೂ 1 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಈಗ ನೀಡಲಾಗುತ್ತಿರುವ ಶೇ 3.5ರಷ್ಟು ಬಡ್ಡಿ ಇನ್ನು ಮುಂದೆ ಶೇ 4ರಷ್ಟು ಆಗಲಿದೆ. 

ಕಿಸಾನ್ ವಿಕಾಸ್ ಪತ್ರಗಳ (ಕೆವಿಪಿ) ಮಾರಾಟವನ್ನು ಇದೇ  ನವೆಂಬರ್ 30ರಿಂದ ಸ್ಥಗಿತಗೊಳಿಸಲೂ ಸರ್ಕಾರ ನಿರ್ಧರಿಸಿದೆ. `ಕೆವಿಪಿ~ಗಳನ್ನು ಲೇವಾದೇವಿ ಉದ್ದೇಶಕ್ಕೆ ದುರುಪಯೋಗ ಮಾಡಿಕೊಳ್ಳುತ್ತಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಇದರ ಜತೆಗೆ, ಮಾಸಿಕ ಹೂಡಿಕೆ ಯೋಜನೆ (ಎಂಐಎಸ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು  (ಎನ್‌ಎಸ್‌ಸಿ) ಪಕ್ವಗೊಳ್ಳುವ (ಮ್ಯಾಚುರಿಟಿ) ಅವಧಿಯನ್ನು 6 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದೆ.

`ಎಂಐಎಸ್~ಗೆ ಶೇ 8.2ರಷ್ಟು ಬಡ್ಡಿ ನೀಡಲಾಗುವುದು. ಡಿಸೆಂಬರ್ 1ರಂದು ಮತ್ತು ಆನಂತರ ತೆರೆಯಲಾಗುವ ಖಾತೆಗಳಿಗೆ ಬೋನಸ್ ದೊರೆಯುವುದಿಲ್ಲ.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ಸ್‌ಗಳಲ್ಲಿ (ಎನ್‌ಎಸ್‌ಸಿ) ಹೂಡಿಕೆ ಮಾಡುವ ಪ್ರತಿ ರೂ 100, 5 ವರ್ಷದ ನಂತರ ರೂ 150.90ರಷ್ಟು ಆಗಲಿದೆ.

`ಪಿಪಿಎಫ್~ನಿಂದ ಪಡೆದ ಸಾಲಕ್ಕೆ ಡಿಸೆಂಬರ್ 1ರಿಂದ ವಾರ್ಷಿಕ ಶೇ 2ರಷ್ಟು  ಬಡ್ಡಿ ವಿಧಿಸಲಾಗುವುದು.
ಅಂಚೆ ಕಚೇರಿಗಳಲ್ಲಿ ತೆರೆಯಲಾಗುವ ಸಂಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ತಿಂಗಳೂ ರೂ 10ರಂತೆ ಠೇವಣಿ ಇರಿಸಿದರೆ, 5 ವರ್ಷಗಳ ನಂತರ ಅದು ಹೂಡಿಕೆ ಮೊತ್ತವು ರೂ 738.62 ಆಗಿರಲಿದೆ.

ಬ್ಯಾಂಕ್‌ಗಳು ಈಗ ಸ್ಥಿರ ಠೇವಣಿಗಳಿಗೆ ಶೇ 9ರಷ್ಟು ಬಡ್ಡಿ ವಿಧಿಸುತ್ತಿವೆ. ಹೀಗಾಗಿ  ಜನರು ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಸಣ್ಣ ಉಳಿತಾಯ ಯೋಜನೆಗಳಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಹಣ ವಾಪಸ್ ತೆಗೆದು ಬ್ಯಾಂಕ್ ಠೇವಣಿಗಳಲ್ಲಿ ತೊಡಗಿಸುತ್ತಿದ್ದಾರೆ.

ಶಾಮಲಾ ಗೋಪಿನಾಥ ಸಮಿತಿಯ ವರದಿಯ ಶಿಫಾರಸಿನ ಅನ್ವಯ, ಸರ್ಕಾರವು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT