ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಗೆ ತಡೆ

Last Updated 25 ಜನವರಿ 2011, 10:10 IST
ಅಕ್ಷರ ಗಾತ್ರ

ತಿಪಟೂರು: ಜಿಲ್ಲಾ ಪಂಚಾಯತಿ ಕಿಬ್ಬನಹಳ್ಳಿ ಕ್ಷೇತ್ರದ ನೂತನ ಸದಸ್ಯ ಆನಂದರವಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ.
* ಪಕ್ಕದ ಕ್ಷೇತ್ರಕ್ಕೆ ಸ್ಥಳಾಂತರ?

-ಎರಡು ದಶಕಗಳಿಂದ ಸಕ್ರಿಯ ರಾಜಕಾರಣದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಕ್ಷೇತ್ರ ಮುಖ್ಯವಾಗಿರಲಿಲ್ಲ. ಜನಪ್ರತಿನಿಧಿಯಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ, ಸ್ಪಂದನೆ ಮೂಲಕ ಅಭಿವೃದ್ಧಿ ಆಯಾಮ ವಿಸ್ತರಿಸುವುದು ಗುರಿಯಾಗಿತ್ತು.

* ಗೆಲ್ಲುವ ವಿಶ್ವಾಸ ಇತ್ತೆ?
-ನನ್ನ ಜನಪರ ಕಾಳಜಿ ಅರ್ಥ ಮಾಡಿಕೊಂಡು ಪಕ್ಕದ ಕ್ಷೇತ್ರದವರೂ ಗೆಲ್ಲಿಸುವ ವಿಶ್ವಾಸದಿಂದಲೇ ಸ್ಪರ್ಧಿಸಿದೆ. ಇನ್ನೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಲೆಕ್ಕಾಚಾರವಿತ್ತು. ಇಡೀ ತಾಲ್ಲೂಕಿನ ಜನತೆಗೆ ನನ್ನ ತುಡಿತ, ಮಿಡಿತ ಅರ್ಥವಾಗಿರುವುದರಿಂದ ಎಲ್ಲಿಯಾದರೂ ಗೆಲ್ಲುವ ವಿಶ್ವಾಸವಿತ್ತು.

* ಹ್ಯಾಟ್ರಿಕ್ ಗೆಲುವು?
-ಇದು ನನ್ನ ಸಾಮಾಜಿಕ ಜವಾಬ್ದಾರಿ, ರಾಜಕೀಯ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಉತ್ಸಾಹ, ಸ್ಪರ್ಧಾತಕ ಮನೋಭಾವಕ್ಕೆ ದೊರೆತ ಗೌರವವಾಗಿದೆ.

* ಈ ಸಾಧನೆಯ ಫಲ?
-ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಗಳು ಈಗ ನನ್ನಲ್ಲಿ ಮಾಗಿವೆ. ಅಭಿವೃದ್ಧಿ ದೃಷ್ಟಿಕೋನ ಬದಲಾಗಿದೆ. ಮೊದಲ ಆದ್ಯತೆಯಾದ ಮೂಲಭೂತ ಸೌಲಭ್ಯಗಳ ಜತೆಗೆ ತಲಸ್ಪರ್ಶಿ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದೇನೆ. ಕಾರ್ಯಗತಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.

* ಗೆಲುವಿನ ಹಿಂದಿನ ಜಾತಿ ಲೆಕ್ಕಾಚಾರ?
-ನಾನು ಯಾವುದೇ ಲೆಕ್ಕಾಚಾರ ಹಾಕಿ ಸ್ಪರ್ಧಿಸಲಿಲ್ಲ. ಉತ್ಸಾಹಿ ಯುವಕರ ಪಡೆ, ನನ್ನನ್ನು ಚೆನ್ನಾಗಿ ಬಲ್ಲ ಜನತೆ ಕೈಹಿಡಿಯುತ್ತಾರೆಂಬ ನಂಬಿಕೆ ಇತ್ತು. ಎಲ್ಲ ಜಾತಿ, ವರ್ಗದವರೂ ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ.

* ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿಬಂದಿದೆಯಲ್ಲಾ?
-ಖಂಡಿತ. ನನ್ನ ರಾಜಕೀಯ ಕ್ರಿಯಾಶೀಲತೆ, ಪಕ್ಷನಿಷ್ಠೆ ಪರಿಗಣಿಸಿ ಪಕ್ಷದ ಮುಖಂಡರೇ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ್ದಾರೆಂದು ತಿಳಿದಿದ್ದೇನೆ. ಅವಕಾಶ ಸಿಕ್ಕರೆ ಪ್ರಾಮಾಣಿಕ ಸೇವೆ ಮೂಲಕ ಜನರ ಮತ್ತು ಮುಖಂಡರ ವಿಶ್ವಾಸ ಉಳಿಸಿಕೊಳ್ಳುತ್ತೇನೆ.

* ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ?
-ಕೆಲವೆಡೆ ಕುಡಿವ ನೀರು, ರಸ್ತೆ ಮತ್ತಿತರ ಸಮಸ್ಯೆ ಇದ್ದು, ಅವುಗಳ ಪರಿಹಾರಕ್ಕೆ ತಕ್ಷಣ ಮುಂದಾಗುತ್ತೇನೆ. ಎಷ್ಟು ಹೊತ್ತಿನಲ್ಲಿ ಕರೆದರೂ ಹೋಗಿ ಜನರಿಗೆ ಸ್ಪಂದಿಸುತ್ತೇನೆ.

* ಅಭಿವೃದ್ಧಿ ಕನಸುಗಳು?
-ನೀರಾವರಿ ಯೋಜನೆ, ದೀನದಲಿತರು, ಕೂಲಿ ಕಾರ್ಮಿಕರಿಗೆ ನೆರವು, ಸ್ವಉದ್ಯೋಗ ತರಬೇತಿ, ಗ್ರಾಮೀಣ ಆರ್ಥಿಕಾಭಿವೃದ್ಧಿ ವಿಶೇಷ ಕಾರ್ಯಕ್ರಮ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದು.

* ಕ್ಷೇತ್ರ ಸಂಚಾರ?
-ಹೊರಗಿನವರೆಂಬ ಯಾವುದೇ ಅಪಸ್ವರ ಕೇಳಿಬರದಂತೆ ನಿರಂತರ ಕ್ಷೇತ್ರ ಸಂಪರ್ಕ ಇಟ್ಟುಕೊಳ್ಳುತ್ತೇನೆ. ಪಡಿತರ ಚೀಟಿ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ಸೇರಿದಂತೆ ಯಾವುದೇ ವೈಯಕ್ತಿಕ ಸಮಸ್ಯೆ ಇದ್ದರೂ ಪರಿಹರಿಸುತ್ತೇನೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT