ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಾರ್ಡ್ಸ್ ಮೇಲೆ ಭಂಡಾರ್ಕರ್‌ಕಣ್ಣು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಮಧುರ್ ಭಂಡಾರ್ಕರ್ ಈಗ `ಅವಾರ್ಡ್~ಗಾಗಿ ಯೋಜನೆ ಸಿದ್ಧಪಡಿಸುತ್ತಿದ್ದಾರೆ ಅಂತ ಸುದ್ದಿಯೊಂದು ಹರಡಿದೆ.

ಅವರ ಚಿತ್ರಗಳಿಗೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುವಾಗ ಯೋಜನೆಯ ಪ್ರಶ್ನೆ ಏನು ಬಂತು ಅಂತ ಅಭಿಮಾನಿಗಳು ಹುಬ್ಬುಗಂಟಿಕ್ಕಿದ್ದಾರೆ. ಆದರೆ ವಿಷಯ ಅದಲ್ಲ, `ಚಾಂದನಿ ಬಾರ್~, `ಪೇಜ್ 3~, `ಟ್ರಾಫಿಕ್ ಸಿಗ್ನಲ್~ `ಜೈಲ್~ `ಕಾರ್ಪೊರೇಟ್~ ಹಾಗೂ `ಫ್ಯಾಶನ್~ನಂಥ ಚಿತ್ರಗಳನ್ನು ನಿರ್ದೇಶಿಸಿರುವ ಭಂಡಾರ್ಕರ್ ಚಲನಚಿತ್ರ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ `ಅವಾರ್ಡ್ಸ್~ ಚಿತ್ರದ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸದ್ಯಕ್ಕೆ ಅವರ ಬಹುನಿರೀಕ್ಷಿತ ಚಿತ್ರ `ಹೀರೊಯಿನ್~ ಈ ವರ್ಷ ತೆರೆ ಕಾಣಲಿದ್ದು, ಅದರ ಸಿದ್ಧತೆಯಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ.

 ಚಲನಚಿತ್ರ ನಟಿಯ ಜೀವನದ ಒಳಚಿತ್ರಣ ನೀಡುವ ಈ ಚಿತ್ರದಲ್ಲಿ ಮಾಹಿ ಖನ್ನಾ ಎಂಬ ಪಾತ್ರವನ್ನು ಐಶ್ವರ್ಯ ರೈ ನಿರ್ವಹಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ಪಾತ್ರವನ್ನೀಗ ಕರೀನಾ ಕಪೂರ್ ನಿರ್ವಹಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT