ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್‌ ಆದ್ಮಿಯಿಂದ 18 ಷರತ್ತು

ಕಾಂಗ್ರೆಸ್‌, ಬಿಜೆಪಿಗೆ ಅರವಿಂದ ಕೇಜ್ರಿವಾಲ್‌ ಪತ್ರ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ‘ನಾವು ದೆಹಲಿ ಕೇಂದ್ರಾಡಳಿತ ಪ್ರದೇಶದ ಸರ್ಕಾರ ರಚಿಸಬೇಕಿದ್ದರೆ ನಮ್ಮ 18 ಅಂಶಗಳ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ’. ಇದು ಕಾಂಗ್ರೆಸ್‌

ಮತ್ತು ಬಿಜೆಪಿಗೆ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಹಾಕಿದ ಷರತ್ತು. 

ಈ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರಿಗೆ ಈ  ಬಗ್ಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.
‘ನಾವು ಯಾರ ಬೆಂಬಲವನ್ನೂ ಕೇಳಿಲ್ಲ. ಆದರೂ ಬೆಂಬಲಿಸಲು ಮುಂದೆ ಬಂದಿರುವ ನಿಮ್ಮ ಉದ್ದೇಶ ಏನು?’ ಎಂದು ಎರಡೂ ಪಕ್ಷಗಳನ್ನು ಅವರು  ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾದ ಆಮ್‌ ಆದ್ಮಿಗೆ ಸರ್ಕಾರ ರಚಿಸಲು ಬೇಷರತ್‌ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ತಿಳಿಸಿತ್ತು. ‘ಅವರು ಸರ್ಕಾರ ರಚಿಸಲು ನಮ್ಮ ಅಭ್ಯಂತರ ಇಲ್ಲ’ ಎಂದು ಬಿಜೆಪಿ ಹೇಳಿತ್ತು.

ರಾಷ್ಟ್ರಪತಿಗೆ ಮಾಹಿತಿ: ಹೊಸ ಸರ್ಕಾರ ರಚನೆಯ ವಸ್ತುಸ್ಥಿತಿ ಬಗ್ಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ  ಲೆ. ಗವರ್ನರ್‌ ನಜೀಬ್‌ ಜಂಗ್‌ ಶನಿವಾರ ವರದಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT